ಉಡುಪಿ ಜಿಲ್ಲಾ ಪೊಲೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೌಖ್ಯವನ ಇವರ ಸಹಭಾಗಿತ್ವದಲ್ಲಿ ಇಂದು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ವ್ಯಸನ ಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಎನ್ನುವ ವಿಷಯವಾಗಿ ಉಡುಪಿಯ ಸೌಖ್ಯ ವನದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಮಾತನಾಡಿ ಜೀವನದ ಪ್ರಥಮ ಪಾಠ ಆತ್ಮರಕ್ಷಣೆ, ಎರಡನೇಯದು ಜೀವ ರಕ್ಷಣೆ, ಪ್ರಾಣಿಪಕ್ಷಿಗಳು ಪ್ರಕೃತಿ ದತ್ತವಾಗಿ ಬದುಕುತ್ತವೆ, ಮನುಷ್ಯರು ವಿಕೃತಿ ದತ್ತವಾಗಿ ಬದುಕುವುದು …
1947 ನೇ ಸವದತ್ತಿ ಶಿಬಿರದ ಸಮಾರೋಪ ಸಮಾರಂಭ
ಸವದತ್ತಿಯಲ್ಲಿ ಇಂದು ನಡೆದ 1947 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವನ್ನು ಶ್ರೀ ಮ. ನಿ. ಪ್ರ. ಸ್ವ. ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತಮಠ ಇನಾಮಹೊಂಗಲ, ಸವದತ್ತಿ ವಹಿಸಿಕೊಂಡಿದ್ದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ, ಮಾನ್ಯ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸವದತ್ತಿ , ಶ್ರೀ ರಾಜಶೇಖರ್ ಕಾರದಗಿ ಮಾಜಿ ಅಧ್ಯಕ್ಷರು ಸೌದತ್ತಿ ಎಲ್ಲಮ್ಮ ಪುರಸಭೆ, ಶ್ರೀ ಮಲ್ಲಿಕಾರ್ಜುನ್ ಬೇವೂರು ಮುಖ್ಯ ಕಾರ್ಯನಿರ್ವಾಹಕರು ಸವದತ್ತಿ ಅರ್ಬನ್ ಕೊ ಆಫ್ ಸೊಸೈಟಿ ಸವದತ್ತಿ,ಹಿರಿಯ ವೈದ್ಯರಾದ ಸಿಬಿ ನಾವದಗಿ, ಶ್ರೀ …
ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಹೊಸಹಳ್ಳಿ ತಾಲೂಕಿನ ಕೆರೆ ಗೋಡು ವಲಯದ ಶ್ರೀ ಮಾಧವ ವಿದ್ಯಾಲಯದ ಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು ಜನ ಜಾಗೃತಿ ಸದಸ್ಯರಾದ ಶ್ರೀ ಮಹದೇವ್ ಕಾರಸ ವಾಡಿ, ಶಾಲೆಯ ಕೋಶಾಧಿಕಾರಿ ಶ್ರೀ ರವಿ, ಕಾರ್ಯದರ್ಶಿ ಯಾದ ಶ್ರೀ ಕುಮಾರ್, ಒಕ್ಕೂಟದ ಅಧ್ಯಕ್ಷರಾದ ಸುಮಿತ್ರ ಭಾಗವಹಿಸಿದ್ದರು ಸದಸ್ಯರಾದ ಶ್ರೀ ಮಹದೇವು ಕಾರಸ ವಾಡಿ ರವರು ಮಕ್ಕಳಿಗೆ ದುಶ್ಚಟ ದಿಂದ ಆಗುವ ಸಮಸ್ಯೆ ಗಳು, ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ, ಜನ ಜಾಗೃತಿ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು 🙏🙏
1943ನೇ ಮದ್ಯವರ್ಜನ ಶಿಬಿರದ ಸಮಾರೋಪ
ಹಾಸನ ಜಿಲ್ಲೆಯ ಬಾಣಾವರದ 1943ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಜಯಚಂದ್ರಶೇಖರ ಸ್ವಾಮಿಯವರು, ಕೇದಿಗೆ ಮಠ, ಕೋಳಗುಂದ ಇವರಿಂದ ಶುಭಾಶೀರ್ವಾದ
ನಶೆ ಮುಕ್ತ ಭಾರತ
ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಇಂದು ನಡೆಯಿತು. “ನಶೆ ಮುಕ್ತ ಭಾರತ ” ಎನ್ನುವ ವಿಷಯವಾಗಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಶ್ರೀಯುತ ಕುಮಾರ್ ಮತ್ತು ಕಾಲೇಜು ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸುಮಾರು 200 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಾಮನಗರ ತಾಲ್ಲೂಕು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿ ಇ ಎನ್ ಪೊಲೀಸ್ ಠಾಣೆ ರಾಮನಗರ ಸಹಯೋಗದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹುಣಸೆದೊಡ್ಡಿಯಲ್ಲಿ ನಡೆಸಲಾಯಿತು.ಕಾರ್ಯಕ್ರಮ ಉದ್ಘಾಟನೆಯನ್ನು ಸವಿತಾ ಪಿ ಆರ್. ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಾಡಿದರು. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ, ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಕಾನೂನಿನಲ್ಲಿ ಶಿಕ್ಷೆಯ ಪ್ರಮಾಣ ಬಗ್ಗೆ …









