ABOUT US
ಪೂಜ್ಯರ ಸಂದೇಶ
ಮಾತಾಶ್ರೀಯವರ ಸಂದೇಶ
ನೂತನ ರಾಜ್ಯಾಧ್ಯಕ್ಷರ ನೇಮಕ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾದ್ಯಕ್ಷರಾಗಿ 3 ವರ್ಷಗಳ ಕಾಲ ವೇದಿಕೆಯನ್ನು ಮುನ್ನಡೆಸಿ ಸಾಧನೆಗೈದ ಶ್ರೀ ವಿ. ರಾಮಸ್ವಾಮಿಯವರ ಅವಧಿಯು ಪೂರ್ಣಗೊಂಡಿದ್ದು ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ವೃತ್ತಿಯಲ್ಲಿ ವಕೀಲರಾಗಿರುವ ಶ್ರೀ ಮಲ್ಲಿಕಾರ್ಜುನ ಮೂ. ರಾಜಣ್ಣ ಕೊರವಿಯವರು 2022-24 ನೇ ಸಾಲಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಮಲ್ಲಿಕಾರ್ಜುನ ಮೂ. ರಾಜಣ್ಣ ಕೊರವಿಯವರು 2022 ರಲ್ಲಿ ಮೂರನೇ ಬಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದರು. ಉತ್ತರ ಕರ್ನಾಟಕ ಪ್ರಸಿದ್ಧ ಚೆಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿಯ ವ್ಯಾಪಾರಸ್ಥರ ಸಂಘದ ಸದಸ್ಯರಾಗಿ, ಹೊಸ ದೆಹಲಿ ಭಾರತ ಕೃಷಿ ಸಮಾಜದ ಸದಸ್ಯರಾಗಿ, ಉಣಕಲ್ ಶ್ರೀ ಸದ್ಗುರು ಸಿದ್ಧೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ ಸೇವೆಯನ್ನು ಮಾಡಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಪ್ರತಿ ವರ್ಷ ಉಚಿತವಾಗಿ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಡಾ| ಎಂ. ಎ. ಜೋಶಿಯವರೊಂದಿಗೆ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕನಿಷ್ಠ 4,೦೦೦ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಅದೇ ರೀತಿ ರಕ್ತದಾನ ಶಿಬಿರವನ್ನು ಪ್ರತಿ ವರ್ಷ ನಿರ್ಮಲಾ ಫೌಂಡೇಶನ್ ಎನ್.ಜಿ.ಒ ಮುಖಾಂತರ ಮಾಡುತ್ತಾ ಬಂದಿದ್ದಾರೆ. ಕಳಸಾ ಬಂಡೂರ ನಾಲಾ ಜೊಡಣಗೊಂಡರೆ ಉತ್ತರ-ಕರ್ನಾಟಕ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ ಎಂದು ಹಲವಾರು ದಶಕಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ. ನೂತನ ಅಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ ಮಾತನಾಡಿ ಸಹಕಾರ ಯಾಚಿಸಿದರು.
ಕಾರ್ಯದರ್ಶಿಯವರ ವರದಿ
ಮದ್ಯಪಾನಾದಿ ದುಶ್ಚಟಗಳ ವಿರುದ್ದ ವ್ಯಾಪಕವಾದ ಜನಾಂದೋಲನವನ್ನು ರೂಪಿಸಿದ ರಾಜ್ಯಮಟ್ಟದ ಏಕೈಕ ಸಂಸ್ಥೆಯೇ ಜನಜಾಗೃತಿ ವೇದಿಕೆ. ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಳೆದ ಎರಡುವರೆ ದಶಕಗಳಿಂದ ಸೇವೆ ನೀಡುತ್ತಾ ಬಂದಿರುವ ವೇದಿಕೆಯು ದುಶ್ಚಟ-ದುರಾಭ್ಯಾಸದಲ್ಲಿರುವ ಸಾವಿರಾರು ಕುಟುಂಬಗಳಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಕಳೆದ 27 ವರ್ಷಗಳಲ್ಲಿ ವೇದಿಕೆಯ ಬಹುತೇಕ ಎಲ್ಲಾ ನಿಯೋಜಿತ ಕಾರ್ಯಕ್ರಮಗಳನ್ನು ಗುರಿಮುಟ್ಟಲು ನಮಗೆ ಸಾಧ್ಯವಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಶ್ಚಟ-ದುರಾಭ್ಯಾಸ ವಿರುದ್ದ ಜಾಗೃತಿ ಮೂಡಿಸುವ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮಗಳನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲೂ ಹಮ್ಮಿಕೊಳ್ಳಲು ಪ್ರಯತ್ನಿಸಲಾಗಿದೆ. ಈ ನಿಟ್ಟಿನಲ್ಲಿ 784 ಸಂಪನ್ಮೂಲ ವ್ಯಕ್ತಿಗಳಿಗೆ ತರಭೇತುದಾರರ ತರಭೇತಿ ನೀಡಲಾಗಿದೆ. ಜಿಲ್ಲಾವಾರು ಸಾಧನೆಯ ವಿವರವನ್ನು ಚಟುವಟಿಕೆಗಳ ವಿವರಣೆಯಲ್ಲಿ ತಮಗೆ ನೋಡಬಹುದಾಗಿದೆ. ಅಲ್ಲದೆ ಪೂಜ್ಯರ ಮಾರ್ಗದರ್ಶನದಲ್ಲಿ 4 ಕಿರುಚಿತ್ರಗಳನ್ನು ರಚಿಸಲಾಗಿದೆ. ಇದರ ಸಮರ್ಪಕ ಅನುಷ್ಟಾನಕ್ಕೆ ಕ್ರೀಯಾ ಯೋಜನೆಯನ್ನು ಹಾಕಲಾಗಿದೆ. ನಗರ ಮತ್ತು ಗ್ರಾಮಗಳ ಪಂಚಾಯತ್ ಸದಸ್ಯರಿಗೆ ಗ್ರಾಮಸ್ವಾಸ್ಥ್ಯದ ಪಾಠ ಹೇಳುವಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ ಬೀದಿ ನಾಟಕ, ಕಾರ್ಯಾಗಾರ, ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿ ಅರಿವು ಮೂಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡದಂತೆ, ಪೇಟೆ-ಪಟ್ಟಣಗಳಲ್ಲಿರುವ ಮದ್ಯದಂಗಡಿಗಳನ್ನು ಸ್ಥಳಾಂತರಿಸದಂತೆ, ಅಂಗಡಿ ಮುಗ್ಗಟ್ಟುಗಳಲ್ಲಿ ಮದ್ಯಪಾನ ಮಾರಾಟ ಮಾಡದಂತೆ ಸರಕಾರಕ್ಕೆ ವರ್ಷಂಪ್ರತಿ ನಿಯೋಗ ತೆರಳಿ ಮನವಿ ನೀಡಲಾಗುತ್ತಿದೆ.
Our Programs
Awareness
Humans become slaves of many bad habits due to the reasons of prestige, to feel free while facing problems and to get Entertainment.
Navajeevan Samiti
In order to have close monitoring and follow-up of Akhila Karnataka Janajagruthi Vedike mobilizes de-addicts in small
Treatment Camps
Policy Advocacy
The office bearers of the forum respond to policy changes effecting the poor with special reference to alcohol.