ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಾಮನಗರ ತಾಲ್ಲೂಕು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿ ಇ ಎನ್ ಪೊಲೀಸ್ ಠಾಣೆ ರಾಮನಗರ ಸಹಯೋಗದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹುಣಸೆದೊಡ್ಡಿಯಲ್ಲಿ ನಡೆಸಲಾಯಿತು.ಕಾರ್ಯಕ್ರಮ ಉದ್ಘಾಟನೆಯನ್ನು ಸವಿತಾ ಪಿ ಆರ್. ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಾಡಿದರು. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ, ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಕಾನೂನಿನಲ್ಲಿ ಶಿಕ್ಷೆಯ ಪ್ರಮಾಣ ಬಗ್ಗೆ ಮಾಹಿತಿ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆಂಚೇಗೌಡ ಪೊಲೀಸ್ ಉಪ ಅದೀಕ್ಷಕರು ಸಿ ಇ ಎನ್ ಪೊಲೀಸ್ ಠಾಣೆ ರಾಮನಗರ ಮಾತನಾಡಿ, ಅತೀ ಬೇಗ ಶ್ರೀಮಂತರಾಗುವ ಆಸೆಯಿಂದ ಸೈಬರ್ ಅಪರಾಧ, ಮಾದಕ ವಸ್ತು ಸೇವನೆ ಮತ್ತು ಸಾಗಾಣಿಕೆ ಪ್ರಕರಣ, ನಿಯಂತ್ರಣಕ್ಕೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಭವಿಷ್ಯದಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದೆ ಉತ್ತಮ ಪ್ರಜೆಗಳಾಗಿ ಬಾಳಿ ಬದುಕುವ ಬಗ್ಗೆ ಮಾರ್ಗದರ್ಶನ ನೀಡಿದರು.ವೇದಿಕೆಯಲ್ಲಿ ಯೋಜನಾಧಿಕಾರಿ ಮುರಳೀಧರ ಎ, ಪ್ರಾಂಶುಪಾಲರು ರೇಖಾ, ಅರೆಕಾಲಿಕ ಸ್ವಯಂ ಸೇವಕರು ಜಯಮ್ಮ,ಮೇಲ್ವಿಚಾರಕರು ಸುಧೀರ್ ಎನ್ ಆರ್, ಸೇವಾಪ್ರತಿನಿಧಿ ಲಕ್ಶ್ಮೀದೇವಮ್ಮ ಉಪಸ್ಥಿತರಿದ್ದರು.