ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾII ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, 1944ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅತ್ತಿಬೆಲೆ ವಲಯ ಇವರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಆನೇಕಲ್ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ ಇದರ ವಿಸ್ತರಣಾ …
ಬೀದರ್ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ಪ್ರಥಮ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬೀದರ್ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೀದರ್ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಬೀದರ್ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ಪ್ರಥಮ ಸಭೆಯನ್ನು ಬೀದರ್ ಜಿಲ್ಲಾ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.ಬೀದರ್ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ದರ್ಮೆಂದ್ರ ರವರು ಕಾರ್ಯಕ್ರಮದಲ್ಲಿ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಬಯಸಿದರು.ಕಾರ್ಯಕ್ರಮವನ್ನು ಕಲಬುರ್ಗಿ ಪ್ರಾದೇಶಿಕ ನಿರ್ದೇಶಕರು ದಿನೇಶ್ ಪೂಜಾರಿ. ಜನಜಾಗೃತಿ ವೇದಿಕೆ ಅಧ್ಯಕ್ಷರು ವಿರೂಪಾಕ್ಷ ಗಾದಾಗಿ ಹಾಗೂ ಜಿಲ್ಲಾ ಕಾರ್ಯದರ್ಶಿ ಮುರುಳಿಧರ್ ಹೆಚ್. …
1942ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಬೆಂಗಳೂರು ಪ್ರಾದೇಶಿಕ ವಿಭಾಗದ ತುಮಕೂರು-2 ಜಿಲ್ಲೆಯ ಚಿಕ್ಕನಾಯಕನಹಳ್ಳಿ ಯೋಜನಾ ಕಛೇರಿವ್ಯಾಪ್ತಿಯ ಸಾದರಹಳ್ಳಿ ಕಾರ್ಯ ಕ್ಷೇತ್ರದ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 1942ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಶೀನಪ್ಪ ಎಂ ಸರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳಬಗ್ಗೆ ಮತ್ತು ಶಿಬಿರಕ್ಕೆ ಸೇರಿ ಪಾನಮುಕ್ತರಾಗಿ ಸಾಧನೆ ಮಾಡಿರುವಂತಹ ನವಜೀವನ ಸಮಿತಿ ಸದಸ್ಯರ ಯಶೋಗಾಥೆಗಳಬಗ್ಗೆ ತಿಳಿಸಿ ಶಿಬಿರಾರ್ಥಿಗಳು ಹಾಗೂ ಶಿಬಿರಾರ್ಥಿಗಳ ಕುಟುಂಬಸ್ಥರಿಗೆ ಮಾಹಿತಿ ಮತ್ತು …
1943ನೇ ಮದ್ಯವರ್ಜನ ಶಿಬಿರ
ಮೈಸೂರು ಪ್ರಾದೇಶಿಕ ವಿಭಾಗದ ಹಾಸನ ಜಿಲ್ಲೆಯ ಬಾಣಾವರ ಯೋಜನಾ ವ್ಯಾಪ್ತಿಯ ಮಾರಗೊಂಡನಹಳ್ಳಿ ಚಿದಾನಂದಾಶ್ರಮದಲ್ಲಿ ನಡೆಯುತ್ತಿರುವ 1943ನೇ ಮದ್ಯವರ್ಜನ ಶಿಬಿರದ ನಾಲ್ಕನೇ ದಿನ ಸಿದ್ಧ ಪುರುಷ ಮುಕುಂದೂರು ಬಸವಲಿಂಗ ಶಿವಯೋಗಿಗಳ ಚಿದಾನಂದಾಶ್ರಮ ಮಠ, ಮಾರಗೊಂಡನಹಳ್ಳಿಯ ಪೂಜ್ಯ ಶ್ರೀಗಳು ಶಿಬಿರಾರ್ಥಿಗಳಿಗೆ ಆಶೀರ್ವಚನದ ಮೂಲಕ ಮಾರ್ಗದರ್ಶನ ಮಾಡಿದರು.
ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಚಿನಕುರಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಶ್ರೀ ಮತಿ ಮಮತರಾವ್ ಮೇಡಮ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು..ತಂಬಾಕು ಇನ್ನಿತರ ಮಾದಕ ವಸ್ತುಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಬಗ್ಗೆ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ದುಶ್ಚಟಕ್ಕೆ ಬಲಿಯಾಗುತ್ತಿದ್ದು ಇದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದೆ ಇದರಿಂದ ಜಾಗೃತರಾಗಿ ದುಶ್ಚಟಕ್ಕೆ ಬಲಿಯಾಗದಂತೆ ಮಾದರಿ ವಿದ್ಯಾರ್ಥಿಯಾಗುವಂತೆ ಮಾರ್ಗದರ್ಶನ ನೀಡಿದರು.. ಸಂಪನ್ಮೂಲ ವ್ಯಕ್ತಿ ಶ್ರೀ ಹೆಚ್. ಆರ್.ಧನ್ಯಕುಮಾರ್ ರವರು ವ್ಯಸನಗಳ ಬಗ್ಗೆ ಅತಿಯಾದ ಮೊಬೈಲ್ …
ನಂದಗಡ ಮದ್ಯವರ್ಜನ ಶಿಬಿರ ಬದುಕಿಗೆ ವರದಾನ, ನಾನು ಮದ್ಯಮುಕ್ತನಾಗಿದ್ದು ಒಂದು ಪವಾಡ.
ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಸಂಜು ಸದೆಪ್ಪ ನಾಯ್ಕರ್ ಉತ್ತಮ ಪಾನಮುಕ್ತ ಬದುಕನ್ನ ಸಾಗಿಸುತ್ತಿದ್ದಾರೆ,2023ರ ನವಂಬರ್ ನಲ್ಲಿ ಖಾನಾಪುರ ತಾಲೂಕಿನ ನಂದಗಡ ಪಟ್ಟಣದಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ, ಕಳೆದ 19 ತಿಂಗಳಿನಿಂದ ಉತ್ತಮ ಪಾನಮುಕ್ತ ಬದುಕನ್ನ ಸಾಗಿಸುವುದರ ಜೊತೆಗೆ ಕೇವಲ ಕಡಿಮೆ ಸಮಯದಲ್ಲಿ ಅತಿ ದೊಡ್ಡ ಸಾಧನೆಯ ಮುನ್ನುಡಿಗೆ ಕಾರಣರಾಗಿದ್ದಾರೆ.ಸಂಜು ನಾಯ್ಕರ್ ರವರಿಗೆ ಒಟ್ಟು :- 6 ಎಕ್ರೆ ಜಮೀನು ಇದ್ದು, ಇದರಲ್ಲಿ ಕಬ್ಬಿನ ಬೇಸಾಯ ಮಾಡುತ್ತಿದ್ದಾರೆ, ಸಹೋದರನ ಜೊತೆ ಸೇರಿ ಊರಿನ ಬೇರೆ ರೈತರ 8ಎಕ್ರೆ ಜಮೀನನ್ನು ಸಾಗುವಳಿಗಾಗಿ ಪಡೆದು ಅದರಲ್ಲಿ …
ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ 2025-26ನೇ ಸಾಲಿನ ಪ್ರಥಮ ಸಭೆ
ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ 2025-26ನೇ ಸಾಲಿನ ಪ್ರಥಮ ಸಭೆ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಕಲ್ಯಾಣ್ ಕುಮಾರ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದ್ರಿ ಸಭೆಯಲ್ಲಿ ವರದಿ ವರುಷದ ಕ್ರಿಯಾ ಯೋಜನೆ ಕಾರ್ಯಕ್ರಮಗಳಾದ ಮ. ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ನವ ಜೀವನ ಸಮಿತಿಗಳ ಬಲವರ್ಧನೆ, ಪಾನ ಮುಕ್ತ ಗ್ರಾಮ ಅನುಷ್ಠಾನದ ಬಗ್ಗೆ, ಹಾಗು ಯೋಜನೆಯ ಇತರ ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರು ಕೈಜೋಡಿಸುವ ಬಗ್ಗೆ ಆರೋಗ್ಯಕರ ಚರ್ಚೆ ನಡೆದು ನಿರ್ಣಯಿಸಲಾಯಿತು.ಸದ್ರಿ ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗೌರವಾನ್ವಿತ ಸದಸ್ಯರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು, …
1940ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಕಲಬುರ್ಗಿ ಪ್ರಾದೇಶಿಕ ವಿಭಾಗದ ಕಲಬುರ್ಗಿ ಜಿಲ್ಲೆಯ ಕಮಲಾಪುರ ಠತಾಲೂಕಿನಲ್ಲಿ ನಡೆಯುತ್ತಿರುವ 1940ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ನಟರಾಜ ಬದಾಮಿ ರಾಜ್ಯ ಸಂಘಟನಾ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ ಬೆಳ್ತಂಗಡಿ ಮಾಹಿತಿ ಮಾರ್ಗದರ್ಶನ ನಿಡುತ್ತಿರುವುದು.
1940 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ
ಕಲಬುರ್ಗಿ ಪ್ರಾದೇಶಿಕ ವಿಭಾಗದ,,ಕಲಬುರ್ಗಿ ಜಿಲ್ಲೆಯ,,ಕಮಲಾಪುರ ತಾಲೂಕಿನಲ್ಲಿ ನಡೆಯುತ್ತಿರುವ 1940 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ರಾಜೇಶ್.ಕೆ. ಮಾನ್ಯ ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ ಶ್ರೀಯುತರು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ಹಾಗೂ ಮಲ್ಲಿನಾಥ್ ಚೋರಗಸ್ತಿ ಸಮಿತಿಯ ಉಪಾಧ್ಯಕ್ಷರು,ವೀರಣ್ಣ ಪಟ್ಟಕಳ್ಳಿ ಸಮಿತಿಯ ಪದಾಧಿಕಾರಿಗಳು, ತಾಲೂಕಿನ ಎಲ್ಲಾ ಕಾರ್ಯಕರ್ತರು,ಸೇವಾ ಪ್ರತಿನಿಧಿಗಳು ನವಜೀವನ ಸಮಿತಿಯ ಸದಸ್ಯರು,ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ,ಆರೋಗ್ಯ ಕಾರ್ಯಕರ್ತರು ಕುಮಾರಿ ರಂಜಿತ ಹೆಚ್ ಎನ್,ಜನಜಾಗೃತಿ ಮೇಲ್ವಿಚಾರಕರಾದ ಮಲ್ಲೇಶ್,ಉಪಸ್ಥಿತರಿದ್ದು ಕಾರ್ಯಕ್ರಮ ನೆರವೇರಿತು.
ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಚಿಕ್ಕೋಡಿ-2 ಯೋಜನಕಛೇರಿ ವ್ಯಾಪ್ತಿಯ ಹಿರೇಕೊಡಿ ವಲಯದ ನೇಜ್ ಗ್ರಾಮದ ಎಂ. ಎಲ್.ಎಂ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮ ವನ್ನು ಮೊದಲಿಗೆ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾಥನೆ ಹೇಳುವ ಮೂಲಕ ಪ್ರಾರಂಬಿಸಲಾಯಿತು, ಕಾರ್ಯಕ್ರಮ ದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಯಾದ ಶ್ರೀಮತಿ ಎ. ಸ್. ಭೋಜೆ ಅವರು ಹಾಗೂ ವೇದಿಕೆ ಮೇಲೆ ಇರುವ ಎಲ್ಲಾ ಶಿಕ್ಷಕರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯವರಾದ ಚಿನಗುಡೇ sir ರವರು ತಂಬಾಕು ವಿರೋಧಿ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ದುಷ್ಟಚಟಾ ಪರಿಣಾಮಗಳಿಂದ …









