251 ನೇ ವಿಶೇಷ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike Uncategorized

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯಿಲ ಜಾಗೃತಿ ಸೌಧದಲ್ಲಿ ನಡೆದ 251 ನೇ ವಿಶೇಷ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಇಂದು ನೆರವೇರಿತು,ಜನ ಜಾಗೃತಿಯ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ವಿವೇಕ್ ವಿನ್ಸೆಂಟ್ ಪಾಯಸ್ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡುತ್ತಾ ಜನಜಾಗೃತಿ ವೇದಿಕೆ ಬೆಳೆದುಕೊಂಡು ಬಂದ ಹಾದಿ ಹಾಗೂ ಈ ಮಧ್ಯವರ್ಜನ ಶಿಬಿರದ ವ್ಯವಸ್ಥೆಯ ಬಗ್ಗೆ, ಮಧ್ಯಪಾನದಿಂದ ಆಗುವ ಅನಾಹುತದ ಕುರಿತು ಒಬ್ಬ ವ್ಯಕ್ತಿಯ ಮೇಲೆ ವ್ಯಸನದಿಂದ ಉಂಟಾಗುವ ಪರಿಣಾಮ,ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯರು ಮಾಡುತ್ತಿರುವ ಸಮಾಜ ಸೇವೆ ಹಾಗೂ ಮಧ್ಯವರ್ಜನ ಶಿಬಿರವೆಂಬ ಈ ಪುಣ್ಯದ ಕೆಲಸದ ಬಗ್ಗೆ ಸವಿಸ್ತಾರವದಂತಹ ಮಾರ್ಗದರ್ಶನವನ್ನು ಪ್ರಾದೇಶಿಕ ನಿರ್ದೇಶಕರು ನೀಡಿದರು,ಬಳಿಕ ಡಾಕ್ಟರ್ ಮೋಹನ್ ದಾಸ್ ಗೌಡರವರ ಹಾಗೂ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಮಾಧವ ಗೌಡ ರವರು ಮತ್ತು ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ ನವಜೀವನ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು,ಈ ಸಂದರ್ಭದಲ್ಲಿ ಆಪ್ತ ಸಮಲೋಚಕರಾದ ಮಧು ರವರು ಶಿಬಿರಾಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು,ಉಪಸ್ಥಿತರಿದ್ದರು.