ಕೊಪ್ಪಳ ಪ್ರಾದೇಶಿಕ ವಿಭಾಗದ. ಗದಗ ಜಿಲ್ಲೆಯ ಗದಗ ತಾಲೂಕಿನ ಶ್ರೀ ಈಶ್ವರಿ ವಿದ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ವತಿಯಿಂದ ನಡೆಸಲಾಗುವ 2000ನೇ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನುನಡೆಸಲಾಯಿತು.ಈ ಸಭೆಯಲ್ಲಿ ಶ್ರೀ ಈಶ್ವರಿ ವಿಶ್ವವಿದ್ಯಾಲಯದ ಸಂಘಟಕರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ, ಶ್ರೀ ಕೇಶವ ದೇವಾಂಗ ನಿರ್ದೇಶಕರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಗದಗ ಪಟ್ಟಣದ ವಿವಿಧ ಸಂಘಟನೆಯ ಸದಸ್ಯರು, ಉದ್ದಿಮೆದಾರರು, ರೈತ ಮುಖಂಡರು, ನಿವೃತ್ತ ಶಿಕ್ಷಕರು, ನಿವೃತ್ತ ಇಂಜಿನಿಯರ್ ಗಳು, ವಿವಿಧ …
ಕುಡಿತ ಬಿಟ್ಟು, 31ಜನರ ಪಾನಮುಕ್ತರ ಬದುಕಿಗೆ ಕಾರಣೀಕರ್ತನಾದ ಮಾಳೇಶ್ವರ ರವರ ಪಾನಮುಕ್ತ ಬದುಕಿನ ಯಶೋಗಾಥೆ
ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ನವಜೀವನ ಸದಸ್ಯ ಮಾಳೇಶ್ವರ ಕರಡಿಗುಡ್ಡ ರವರು ಕಳೆದ 10 ವರ್ಷ ಗಳಿಂದ ಕಲಘಟಗಿಯ ಮದ್ಯ ವರ್ಜನ ಶಿಬಿರಕ್ಕೆ ಸೇರಿ ಪಾನಮುಕ್ತ ರಾಗಿ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ.ಶಿಬಿರಕ್ಕೆ ಸೇರಿ ಪಾನಮುಕ್ತರಾದ ಮೇಲೆ ಮಾಳೇಶ್ವರವರು 38 ಜನರನ್ನು ಶಿಬಿರಕ್ಕೆ ಸೇರಿಸಿ, 31 ಜನರ ಪಾನಮುಕ್ತ ಬದುಕಿಗೆ ಕಾರಣೀಕರ್ತರಾಗಿದ್ದಾರೆ, ಇವರ ಸಮಾಜಮುಖಿ ಸೇವೆಗೆ ಪೂಜ್ಯರಿಂದ ಜಾಗೃತಿ ಮಿತ್ರ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.ತಮಗಿದ್ದ 6 ಎಕ್ರೆ ಜಮೀನಿನಲ್ಲಿ ಕಬ್ಬು, ಸೋಯಾಬಿನ್, ಗೋವಿನಜೋಳ ಕೃಷಿ ಯೊಂದಿಗೆ ಉತ್ತಮ ಕೃಷಿಕ ಏನಿಸಿಕೊಂಡಿದ್ದಾರೆ.ಪಾನಮುಕ್ತ ರಾದ ಮೇಲೆ 20 ಲಕ್ಷ …
ಬಾಗಲಕೋಟೆ ಜಿಲ್ಲಾ ಜನಜಾಗೃತಿ ವೇದಿಕೆ ಸಭೆ
ಕೊಪ್ಪಳ ಪ್ರಾದೇಶಿಕ ವಿಭಾಗದ ಬಾಗಲಕೋಟೆ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಕಾಂತ್ ಸಂದಿಮನಿ ಉಪಾಧ್ಯಕ್ಷರಾದ ಶ್ರೀ ವೆಂಕಪ್ಪ ಮುಳ್ಳೂರ ಕಾರ್ಯದರ್ಶಿ ಶ್ರೀ ಚನ್ನಕೇಶವ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು.2025/2026ಆರ್ಥಿಕ ವರ್ಷದ ಸಾಧನೆಯ ವಿಮರ್ಶೆ,ಸಮಗ್ರ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ತಾಲೂಕುವಾರು ವರದಿ ಮಂಡನೆ ನವಜೀವನ ಸಮಿತಿ ಸಭೆ & ನವ ಜೀವನ ಸಮಿತಿಯ ಪ್ರಗತಿಯ ಅವಲೋಕನ,ನವ ಜೀವನೋತ್ಸವ ಕಾರ್ಯಕ್ರಮದ ಬಗ್ಗೆ,ಜಿಲ್ಲಾ ಜನಜಾಗೃತಿ ವೇದಿಕೆಯ ಲೆಕ್ಕಾಚಾರ & ಆಂತರಿಕ ಲೆಕ್ಕ ಪರಿಶೋಧನೆಯ ಬಗ್ಗೆ 25/2026ಆರ್ಥಿಕ ವರ್ಷದ ಮದ್ಯ ವರ್ಜನ ಶಿಬಿರದ ಕಾರ್ಯಕ್ರಮ …
1984ನೆ ಮದ್ಯವರ್ಜನ ಶಿಬಿರ
ಚಿತ್ರದುರ್ಗ ಪ್ರಾದೇಶಿಕ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಕಚೇರಿ ವ್ಯಾಪ್ತಿಯ ಶಿವಮೊಗ್ಗದಲ್ಲಿ ನಡೆಯುತ್ತಿರುವ 1984ನೇ ಮದ್ಯವರ್ಜನ ಶಿಬಿರದ 3ನೆ ದಿವಸದಲ್ಲಿ ಜನಜಾಗ್ರತಿ ಪ್ರಾದೇಶಿಕ ನಿರ್ದೇಶಕರು ಶ್ರೀ ವಿವೇಕ್. ವಿ. ಪಾಯಸ್ ಸರ್ ಅವರು ಶಿಬಿರರ್ಥಿಗಳಿಗೆ ಮಾಹಿತಿ &ಮಾರ್ಗದರ್ಶನ ಮಾಡಿರುತ್ತಾರೆ
ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ರವರಿಂದ.. ಕಾರಾಗೃಹ ಬಂದಿಗಳಿಗೆ ಮಾರ್ಗದರ್ಶನದ ಕ್ಷಣ
ದುರ್ಬಲ ಮನಸ್ಸು ಮತ್ತು ದುರ್ಬಲ ವ್ಯಕ್ತಿತ್ವ ವ್ಯಸನಕ್ಕೆ ಮೂಲ ಕಾರಣವಾಗುತ್ತದೆ, ವ್ಯಕ್ತಿಯೊಬ್ಬನ ವೀಕ್ನೆಸ್ ನಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳಿಯುವಂತೆ ಆಗಬಾರದು, ದೊಡ್ಡ ದೊಡ್ಡ ಹಡಗುಗಳು ಮುಳುಗುವುದು ಅದರಲ್ಲಿ ಇದ್ದ ತಾಂತ್ರಿಕ ದೋಷವೇ ಕಾರಣ ಹಾಗೆ ನಮ್ಮಲ್ಲಿ ದೋಷಗಳು ಜಾಸ್ತಿಯಾದಾಗ ನೈತಿಕ ಅದಪತನಕ್ಕೆ ಕಾರಣವಾಗುತ್ತದೆ. ದೋಷ ಮುಕ್ತ ವ್ಯಕ್ತಿತ್ವ ನಾವೇ ನಿರ್ಮಿಸಿಕೊಳ್ಳಬೇಕು,ನಮ್ಮ ಮೇಲೆ ನಾವೇ ಹತೋಟಿ ಇಟ್ಟುಕೊಂಡಾಗ ಮಾತ್ರ ಹೀರೋ ಆಗಲು ಸಾಧ್ಯ, ಇನ್ನೊಬ್ಬರ ಹತೋಟಿಯಲ್ಲಿದ್ದಾಗ ಸಾಧ್ಯವಿಲ್ಲ, ದಿಕ್ಕು ತಪ್ಪಿದ ತಮಗೆ ಇದೊಂದು ದೀಕ್ಷಾ ಕೇಂದ್ರವಾಗಬೇಕು, ಇಲ್ಲಿರುವ ಎಲ್ಲರೂ ಸನ್ನಡತೆಯ ದೀಕ್ಷೆ ತೆಗೆದುಕೊಳ್ಳಬೇಕು. …
256ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುವ 256ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಕಾರ್ಯ ಕ್ರಮದಲ್ಲಿ ಜನ ಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಸರ್ ರವರಿಂದ ಮಾಹಿತಿ.
1983ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ
ಶಿಕಾರಿಪುರ ತಾಲೂಕಿನಲ್ಲಿ ನಡೆಯುತ್ತಿರುವ 1983ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ದಿನೇಶ್ ಎಂ, ನಿರ್ದೇಶಕರು ಶಿರಸಿ ಜಿಲ್ಲೆ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ನೇತ್ರತ್ವದಲ್ಲಿ ನಡೆಯುವ ಮದ್ಯವರ್ಜನ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಕೆ ಎಂ ಮುನೇಗೌಡ ರವರು ಆಯ್ಕೆ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ವಕೀಲರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆದ ಕೆಎಂ ಮುನೇಗೌಡ ಸರ್ ರವರಿಗೆ ಗೌರವಪೂರ್ವಕ ಅಭಿನಂದನೆಗಳು…
ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ದ್ವಿತೀಯ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಲಬುರಗಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಲಬುರಗಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ದ್ವಿತೀಯ ಸಭೆಯನ್ನು ಜಿಲ್ಲಾ ಕಚೇರಿ ಸಭವನದಲ್ಲಿ ನಡೆಸಲಾಯಿತು.ಕಲಬುರಗಿ ತಾಲೂಕಿನ ಯೋಜನಾಧಿಕಾರಿಗಳಾದ ರಿಯಾಜ್ ಅತ್ತಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಬಯಸಿದರು.ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಅಧ್ಯಕ್ಷರು ಸಿಎನ್ ಬಾಬಳ್ಗಾವ್ ಹಾಗೂ ಜಿಲ್ಲಾ ಕಾರ್ಯದರ್ಶಿ ಗಣಪತಿ ಮಾಳಂಜಿ ಹಾಗೂ ಎಲ್ಲಾ ತಾಲೂಕಿನ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು …









