ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ನವಜೀವನ ಸದಸ್ಯ ಮಾಳೇಶ್ವರ ಕರಡಿಗುಡ್ಡ ರವರು ಕಳೆದ 10 ವರ್ಷ ಗಳಿಂದ ಕಲಘಟಗಿಯ ಮದ್ಯ ವರ್ಜನ ಶಿಬಿರಕ್ಕೆ ಸೇರಿ ಪಾನಮುಕ್ತ ರಾಗಿ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ.ಶಿಬಿರಕ್ಕೆ ಸೇರಿ ಪಾನಮುಕ್ತರಾದ ಮೇಲೆ ಮಾಳೇಶ್ವರವರು 38 ಜನರನ್ನು ಶಿಬಿರಕ್ಕೆ ಸೇರಿಸಿ, 31 ಜನರ ಪಾನಮುಕ್ತ ಬದುಕಿಗೆ ಕಾರಣೀಕರ್ತರಾಗಿದ್ದಾರೆ, ಇವರ ಸಮಾಜಮುಖಿ ಸೇವೆಗೆ ಪೂಜ್ಯರಿಂದ ಜಾಗೃತಿ ಮಿತ್ರ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.ತಮಗಿದ್ದ 6 ಎಕ್ರೆ ಜಮೀನಿನಲ್ಲಿ ಕಬ್ಬು, ಸೋಯಾಬಿನ್, ಗೋವಿನಜೋಳ ಕೃಷಿ ಯೊಂದಿಗೆ ಉತ್ತಮ ಕೃಷಿಕ ಏನಿಸಿಕೊಂಡಿದ್ದಾರೆ.ಪಾನಮುಕ್ತ ರಾದ ಮೇಲೆ 20 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ, ಹೈನುಗಾರಿಕೆ ಶೆಡ್ ರಚನೆಯೊಂದಿಗೆ ಹೈನುಗಾರಿಕೆ ಮಾಡಿಕೊಂಡಿದ್ದಾರೆ, ತಮ್ಮ ಜಮೀನು ಅಲ್ಲದೇ ತನ್ನ ಸಹೋದರನ 9 ಎಕ್ರೆ ಜಮೀನನ್ನು ಲವಣಿ ಪಡೆದು ಅದರಲ್ಲಿ ಕೃಷಿಯನ್ನು ಮಾಡಿ, ವರ್ಷಕ್ಕೆ 4 ಲಕ್ಷ ರೂಪಾಯಷ್ಟು ಲಾಭ ಪಡೆಯುತ್ತಿದ್ದಾರೆ, ತಮ್ಮ ಕೃಷಿ ಜಮೀನಿನ ಸಾಗುವಳಿ ಮಾಡಲು ಒಂದು ಸ್ವಂತ ಟ್ರಾಕ್ಟರ್ ಹೊಂದಿದ್ದಾರೆ.ಇವರ ಉತ್ತಮ ಪಾನಮುಕ್ತ ಬದುಕನ್ನು ಕಂಡ ಗ್ರಾಮದ ಜನ ಊರಿನ ಹಿರಿತನದ ಜವಾಬ್ದಾರಿಯನ್ನು ಇವರಿಗೆ ಹೆಗಲಿಗೆ ಹೊರಿಸಿ, ಗ್ರಾಮದ ಎಲ್ಲ ಧಾರ್ಮಿಕ ಉತ್ಸವಾದಿಗಳನ್ನು ಇವರ ನೇತೃತ್ವದಲ್ಲಿ ನಡೆಸಿಕೊಂಡು ಹೋಗಲಾಗುತ್ತಿದೆ.
