ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ದ್ವಿತೀಯ ಸಭೆ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಲಬುರಗಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಲಬುರಗಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ದ್ವಿತೀಯ ಸಭೆಯನ್ನು ಜಿಲ್ಲಾ ಕಚೇರಿ ಸಭವನದಲ್ಲಿ ನಡೆಸಲಾಯಿತು.ಕಲಬುರಗಿ ತಾಲೂಕಿನ ಯೋಜನಾಧಿಕಾರಿಗಳಾದ ರಿಯಾಜ್ ಅತ್ತಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಬಯಸಿದರು.ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಅಧ್ಯಕ್ಷರು ಸಿಎನ್ ಬಾಬಳ್ಗಾವ್ ಹಾಗೂ ಜಿಲ್ಲಾ ಕಾರ್ಯದರ್ಶಿ ಗಣಪತಿ ಮಾಳಂಜಿ ಹಾಗೂ ಎಲ್ಲಾ ತಾಲೂಕಿನ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಹಾಸೀನರಿದ್ದ ಗಣ್ಯಮಾನ್ಯರುಗಳು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಸಭೆಯನ್ನು ಉದ್ಗಾಟನೆಯನ್ನು ನೆರವೇರಿಸಿದರು.ಕಲಬುರಗಿ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಯುತ ಗಣಪತಿ ಮಾಳಂಜಿ ಸರ್ ರವರು ಗತಸಭೆಯ ವರದಿಯನ್ನು ಮಂಡಿಸಿದರು.ಕಲಬುರಗಿ ಜಿಲ್ಲಾ ಕಛೇರಿ ವ್ಯಾಪ್ತಿಯ ಕಲಬುರಗಿ, ಆಳಂದ, ಕಮಲಾಪುರ , ಆಫ್ಜಲ್ ಪುರ, ಸೇಡಂ. ಚಿಂಚೋಳಿ ಯೋಜನಾ ಕಛೇರಿಯ ಯೋಜನಾಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು.ಕಲಬುರ್ಗಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಶ್ರೀ ರಾಜೇಶ್ ಕೆ ರವರು ಕಲಬುರಗಿ ಜಿಲ್ಲೆಯ ಜನಜಾಗೃತಿ ವೇದಿಕೆಯ 2025-2026 ನೇ ಕ್ರಿಯಾ ಯೋಜನೆ ಪ್ರಕಾರ ಅಕ್ಟೋಬರ್ 2 ಕಾರ್ಯಕ್ರಮದ ಕುರಿತು ನವ ಜೀವನ ಸಮಿತಿ ಸದಸ್ಯರ ಅಭಿನಂದಿಸಲು ಕಾರ್ಯಕ್ರಮದ ತಯಾರಿ ಕುರಿತು ತಿಳಿಸಲಾಯಿತು ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಮುಗಿಸಿದ ಬಗ್ಗೆ ಅಭಿನಂದಿಸಲಾಯಿತು ಮಾದಕ ವಸ್ತು ವಿರೋಧ ದಿನಾಚರಣೆ ಕಾರ್ಯಕ್ರಮ ಮುಗಿಸಿದ ಕುರಿತು ಅಭಿನಂದಿಸಲಾಯಿತು
ಆಫ್ಜಲ್ ಪುರ ಮದ್ಯವರ್ಜನ ಶಿಬಿರದ ಬಗ್ಗೆ ಚರ್ಚಿಸಲಾಯಿತು ಅಕ್ಟೋಬರ್ 2 ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು ಅಳಂದ ಕಲ್ಬುರ್ಗಿ ಕಮಲಾಪುರ ಅಬ್ಜಲ್ಪುರ ನಾಲ್ಕು ತಾಲೂಕಿನ ಅಕ್ಟೋಬರ್ ಎರಡರ ಕಾರ್ಯಕ್ರಮ ಮಾಡುವುದಾಗಿ ತೀರ್ಮಾನಿಸಲಾಯಿತು ಸೇಡಂ ಚಿಂಚೋಳ್ಳಿ ಎರಡು ತಾಲೂಕಿನ ಅಕ್ಟೋಬರ್ ಎರಡರ ಕಾರ್ಯಕ್ರಮ ಮಾಡುವುದೆಂದು ತೀರ್ಮಾನಿಸಲಾಯಿತು.ಜಿಲ್ಲೆಯಲ್ಲಿ ಅಕ್ಟೋಬರ್ 2 ಕಾರ್ಯಕ್ರಮ 2 ಕಾರ್ಯಕ್ರಮ ಮಾಡುವುದಾಗಿ ತೀರ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಸಿಎನ್ ಬಾಬಲ್ಗಾವ್ ರವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು.ವೇದಿಕೆಯ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಜನಜಾಗೃತಿ ಸದಸ್ಯರು ಎಲ್ಲಾ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ವಿಚಕ್ಷಣಧಿಕಾರಿಗಳು ಉಪಸ್ಥಿತರಿದ್ದರು