ಮದ್ಯ ಮುಕ್ತನಾಗಿ ಯಶಸ್ಸನ್ನು ಕಂಡ ಕಾಫಿನಾಡಿನ ರವಿ ಶೆಟ್ಟಿ

Janajagurthi Vedike

ಮೂಡಿಗೆರೆ ತಾಲೂಕಿನ ಯಡೂರು ಗ್ರಾಮದ ರವಿ ಶೆಟ್ಟಿಯವರು ಕಿರಣಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ 18 ವಯಸ್ಸಿನಲ್ಲಿ ಸ್ನೇಹಿತರ ಸಹವಾಸದಿಂದ ಮದ್ಯಪಾನ ಚಟಕ್ಕೆ ಬಲಿಯಾಗಿದ್ದು 27 ವರ್ಷ ಮಧ್ಯಪಾನದ ದಾಸನಾಗಿದ್ದರು.  ಇವರು ಕೆಲಸ ಬಿಟ್ಟು ಬರುವುದು ರಾತ್ರಿ ಮಕ್ಕಳು ಮಲಗಿದ ನಂತರ ಬೆಳಗ್ಗೆ  ಮಕ್ಕಳು ಏಳುವುದಕ್ಕಿಂತ ಮುಂಚೆಯೇ ಕೆಲಸಕ್ಕೆ ಹೋಗುತ್ತಿದ್ದರು, ಆದ್ದರಿಂದ ಅವರ ಮಕ್ಕಳಿಗೆ ತಂದೆಯ ಪರಿಚಯವೇ ಇಲ್ಲದಂತಾಗಿತ್ತು. ದುಡಿದ ಹಣವನ್ನು ಕುಡಿತಕ್ಕೆ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದರು,  ಕುಡಿಯುವುದಕ್ಕಾಗಿ ಒಂದು ಎಕರೆ ಜಾಗವನ್ನು ಕೇವಲ 15 ಸಾವಿರಕ್ಕೆ ಮಾರಾಟ ಮಾಡಿರುತ್ತಾರೆ.             ಇಂತಹ ಸಂದರ್ಭದಲ್ಲಿ ಕುಡಿತ …