ಅಥಣಿ, ಅಗಸ್ಟ್ 26: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ ಅಥಣಿಯ ಉರಗ ತಜ್ಞ ಶ್ರೀ ಗುರುಲಿಂಗ ಶಂಕೆ ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ. ಶಿರುಗುಪ್ಪಿ ಗ್ರಾಮದ ಶ್ರೀಕಾಂತ್ ಸಳ್ಳಕೋಡ ಅವರ ತೋಟದ ಮನೆಯ ಹತ್ತಿರ ಹಾವೊಂದು ಕಂಡುಬಂದಿತ್ತು. ಅಪಾಯಕಾರಿಯಂತೆ ಕಂಡುಬರುತ್ತಿರುವ ಈ ಹಾವು ಕಣ್ಣಿಗೆ ಗೋಚರವಾಗುತ್ತಿದ್ದಂತೆ ಶ್ರೀಕಾಂತ್ ಅವರು ಶ್ರೀ ಧರ್ಮಸ್ಥಳ ಸೇವಾ ಘಟಕದ ಸ್ವಯಂಸೇವಕ ಗುರುಲಿಂಗ ಶಂಕೆ ಅವರಿಗೆ ದೂರವಾಣಿ ಕರೆ ಮಾಡಿದ್ದರು. ತಕ್ಷಣ ಸ್ಪಂದಿಸಿದ ಇವರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಹತ್ತಿರದ …
ಗ್ರಾಮದಲ್ಲಿ ಭೀತಿ ಮೂಡಿಸಿದ್ದ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಶ್ರೀ ಧರ್ಮಸ್ಥಳ ಸೇವಾ ಕಿಲ್ಲೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು
ಬೆಳ್ತಂಗಡಿ, ಆಗಸ್ಟ್ 19: ಕಿಲ್ಲೂರು ಗ್ರಾಮದ ಜನರಿಗೆ ಬಹಳ ದಿನಗಳಿಂದ ಆಗಾಗ ಕಾಣಿಸಿಕೊಂಡು ತೊಂದರೆ ಕೊಡುತ್ತಿದ್ದ ಹಾವೊಂದನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ ‘ಶ್ರೀ ಧರ್ಮಸ್ಥಳ ಸೇವಾ’ ಕಿಲ್ಲೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು. ಅನೆಕಂದೊಡಿ ಎಂಬ ಹಾವು ಆಗಾಗ್ಗೆ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಮಕ್ಕಳು, ಮನೆಮಂದಿಯೆಲ್ಲಾ ಭಯದಿಂದ ನಾಲ್ಕಾರು ದಿನಗಳನ್ನು ಕಳೆದಿದ್ದರು. ಸಮಸ್ಯೆಯನ್ನು ಅರಿತ ಶ್ರೀ ಧರ್ಮಸ್ಥಳ ಸೇವಾ ನಿರ್ವಹಣಾ ಘಟಕದ ಸ್ವಯಂಸೇವಕರಾದ ಶ್ರೀ ರತನ್ ಶೆಟ್ಟಿ ಹಾಗೂ ಶ್ರೀ ವಿನಯಚಂದ್ರ ಅವರು ಸ್ಥಳೀಯರಾದ ಶ್ರೀ ಕೃಷ್ಣಪ್ಪ ಪೂಜಾರಿ, ಉಮೇಶ್ ಪೂಜಾರಿ ಹಾಗೂ …
Staff Training
📚*NITTEಎಜುಕೇಶನ್ ಇಂಟರ್ನ್ಯಾಷನಲ್ ಮಂಗಳೂರುನಲ್ಲಿ ,ನಡೆದ ಜನಜಾಗೃತಿ ವೇದಿಕೆ ಸಿಬ್ಬಂದಿವರ್ಗದ ತರಬೇತಿ ಕಾರ್ಯಗಾರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. LH ಮಂಜುನಾಥ್ ಸರ್ ರವರು