ಶ್ರೀ ಧರ್ಮಸ್ಥಳ ಸೇವಾ ತಣ್ಣೀರುಪಂಥ ಘಟಕದ ಸ್ವಯಂಸೇವಕರಿಂದ ಐದು ಕಿಲೋಮೀಟರ್ ರಸ್ತೆಯ ಇಕ್ಕೆಲಗಳ ಸ್ವಚ್ಛತೆ

Janajagurthi Vedike News

ಗುರುವಾಯನಕೆರೆ, ಆಗಸ್ಟ್ 18: ಶ್ರೀ ಧರ್ಮಸ್ಥಳ   ಸೇವಾ ತಣ್ಣೀರುಪಂಥ ಘಟಕದ ಸ್ವಯಂಸೇವಕಿಯಾದ ಶ್ರೀಮತಿ ಶೋಭಾ ಕುಪ್ಪೆಟ್ಟಿ ಅವರು ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರಿಗೆ ಪ್ರೇರಣೆ ನೀಡಿ, ಅವರ ನೆರವಿನಿಂದ ಐದು ಕಿಲೋಮೀಟರ್ ಉದ್ದುಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.           ಕುಪ್ಪೆಟ್ಟಿಯಿಂದ ನೆಕ್ಕಿಲು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಪ್ರಮಾಣದಲ್ಲಿ ಹುಲ್ಲು, ಅನಾವಶ್ಯಕ ಗಿಡಗಳು, ಪೊದೆಗಳು ಬೆಳೆದಿದ್ದವು. ದಾರಿಹೋಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದ್ದ ಇದನ್ನು ಗಮನಿಸಿದ ಸ್ವಯಂಸೇವಕಿ ಶೋಭಾ ಅವರು ಅವುಗಳನ್ನು ತೆರವುಗೊಳಿಸಲು ನಿರ್ಧರಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರು ಭಾಗಿಯಾಗುವಂತೆ …

ಸಕಲೇಶಪುರದಲ್ಲಿ ಕುಸಿದು ಬಿದ್ದ ಮನೆಗೆ ತೆರಳಿ ತಾತ್ಕಲಿಕ ಸೂರು ಒದಗಿಸಿಕೊಟ್ಟ ವಿಪತ್ತು ನಿರ್ವಹಣೆ ನೆರಿಯ ಘಟಕದ ಸ್ವಯಂಸೇವಕರು

Janajagurthi Vedike News

ಬೆಳ್ತಂಗಡಿ, ಆಗಸ್ಟ್ 16: ನೆರಿಯ ಗ್ರಾಮದ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರಾದ ಶ್ರೀ ನವೀನ್ ಅವರು ಸಕಲೇಶಪುರ ತಾಲೂಕಿನ ತನ್ನ ಸ್ನೇಹಿತ ಲತೇಶ್ ಅವರ ಮನೆ ವಿಪರೀತ ಗಾಳಿ,ಮಳೆಯ ಕಾರಣದಿಂದ ಕುಸಿದು ಬಿದ್ದಿರುವ ವಿಷಯವನ್ನು ತಿಳಿದು ಕೂಡಲೇ ನೆರಿಯ ಗ್ರಾಮದಲ್ಲಿರುವ ತನ್ನ ಸ್ನೇಹಿತರೊಂದಿಗೆ ಧಾವಿಸಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ದಿನಾಂಕ 16ರ ರಾತ್ರಿ ಮನೆ ಕುಸಿದ ಬಗ್ಗೆ ಸ್ನೇಹಿತನಿಂಧ ವಿಷಯ ತಿಳಿದಿದೆ. ಕೂಡಲೇ ಸ್ಪಂದಿಸದಿದ್ದರೆ ವಿಪರೀತ ಮಳೆ ಸುರಿಯುತ್ತಿರುವ ಅಲ್ಲಿ ಆ ಕುಟುಂಬಕ್ಕೆ ಬಹಳ ತೊಂದರೆ ಕಟ್ಟಿಟ್ಟ ಬುತ್ತಿ ಎಂದುಕೊಂಡ …

ಕಿಂಡಿ ಅಣೆಕಟ್ಟು ಸ್ವಚ್ಛಗೊಳಿಸಿ ಸಂಭವನೀಯ ಅಪಾಯ ತಪ್ಪಿಸಿದ ವಿಪತ್ತು ನಿರ್ವಹಣೆ ಸ್ವಯಂಸೇವಕರು

Janajagurthi Vedike News

ಬೆಳ್ತಂಗಡಿ, ಆಗಸ್ಟ್ 16: ನಡ ಗ್ರಾಮದ ಬೋಜಾರ ಬೈಲಿನಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಅತಿ ಮಳೆಯ ಕಾರಣದಿಂದ ಭಾರೀ ಗಾತ್ರದ ಮರಗಳು ತೇಲಿಕೊಂಡು ಬಂದು ಅಣೆಕಟ್ಟಿನ ಕಿಂಡಿಗಳಿಗೆ ಸಿಲುಕಿಕೊಂಡಿತ್ತು. ಪರಿಣಾಮ ನೀರು ಸೇತುವೆಯ ಪಕ್ಕದ ಸ್ಥಳದಲ್ಲಿ ಹರಿದುಹೋಗಲಾರಂಭಿಸಿತ್ತು. ತುರ್ತಾಗಿ ಮರಮುಟ್ಟಗಳನ್ನು ತೆರವುಗೊಳಿಸದಿದ್ದರೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇತ್ತು. ನದಿಯ ನೀರು ಕಿಂಡಿ ಅಣೆಕಟ್ಟಿನಿಂದ ಹರಿದು ಹೋಗಲು ಸಾಧ್ಯವಿಲ್ಲದೇ ಪಕ್ಕದಲ್ಲೇ ಕಾಲುವೆ ನಿರ್ಮಿಸಿಕೊಂಡು ಹರಿಯಲಾರಂಭಿಸಿತ್ತು. ಇದನ್ನು ಉಪೇಕ್ಷಿಸಿದರೆ ಸುತ್ತಲಿನ ಹದಿನೈದಕ್ಕೂ ಅಧಿಕ ಮನೆಗಳು ಮತ್ತು ನೂರಾರು ಎಕರೆ ಅಡಿಕೆ ಹಾಗೂ ರಬ್ಬರ್ ತೋಟಗಳು ನೆಲಕ್ಕೆ ಉರುಳುವ ಅಪಾಯವಿತ್ತು. …

ಶ್ರೀ ಧರ್ಮಸ್ಥಳ ಸೇವಾ ನೆರಿಯ ವಿಪತ್ತು ನಿರ್ವಹಣೆ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ

Janajagurthi Vedike News

ನೆರಿಯ ಗ್ರಾಮದ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು. ಸ್ವಯಂಸೇವಕರಾದ ನವೀನ್ ಹಾಗೂ ಆಟೋ ಚಾಲಕರು ಸೇರಿ ಹನಿಯೂರು ಪೇಟೆಯಲ್ಲಿ ಕಸ ಕಡ್ಡಿಗಳ ಹಾಗೂ ಗಿಡ ಪೊದೆಗಳನ್ನು ತೆಗೆದು ಸ್ವಚ್ಛತಾ ಕಾರ್ಯ ಮಾಡಿರುತ್ತಾರೆ.

ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದಿಂದ ಶಾಲಾ ಮೈದಾನದಲ್ಲಿ ಗಿಡ ನಾಟಿ ಕಾರ್ಯಕ್ರಮ

Janajagurthi Vedike Uncategorized

ಬೆಳ್ತಂಗಡಿ, ಆಗಸ್ಟ್ 19: ಶ್ರೀ ಧರ್ಮಸ್ಥಳ ಸೇವಾ ನಡ ಗ್ರಾಮದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಿಂದ ಹಿರಿಯ ಪ್ರಾಥಮಿಕ ಶಾಲೆ ಮಂಜೊಟ್ಟಿಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಜಿತ್ ಆರಿಗ ಅವರು ದೀಪ ಬೆಳಗಿಸುವ ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೆ ಗಿಡ ವಿತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿ ಶ್ರೀ  ಧರ್ಮಸ್ಥಳ  ಸೇವಾ ವಿಪತ್ತು ನಿರ್ವಹಣಾ ಘಟಕ ಬೆಳ್ತಂಗಡಿ ತಾಲೂಕಿನಲ್ಲಿ ಬಹಳ  ಉತ್ತಮ ಸೇವಾಕಾರ್ಯವನ್ನು ನಡೆಸುತ್ತಿದೆ. ಕಿಂಡಿ ಅಣೆಕಟ್ಟು ಸ್ವಚ್ಛತೆಯಂತಹ ಕಾರ್ಯ ನಡೆಸಿ …

ಗುರುವಾಯನಕೆರೆ: ನಾಡಿಗೆ ಬಂದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞೆ ಶೋಭಾ..

Janajagurthi Vedike News

ಗುರುವಾಯನಕೆರೆ, ಅಗಸ್ಟ್ 26: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಉರಗ ತಜ್ಞೆ ಶ್ರೀಮತಿ ಶೋಭಾ ಅವರು ಮಧ್ಯರಾತ್ರಿಯಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ. ತಣ್ಣೀರುಪಂಥ ವಲಯದ ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಉದ್ದನೆಯ  ಹೆಬ್ಬಾವೊಂದು ಕಂಡುಬಂದಿತ್ತು. ಅಪಾಯಕಾರಿಯಂತೆ ಕಂಡುಬರುತ್ತಿರುವ ಹಾವು ಕಣ್ಣಿಗೆ ಗೋಚರವಾದಾಗ ಸಮಯ ಮಧ್ಯರಾತ್ರಿ ರಾತ್ರಿ ಹನ್ನೆರಡು ಗಂಟೆ. ತುರ್ತು ಕೆಲಸದ ನಿಮಿತ್ತ ಆ ರಸ್ತೆಯಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಶ್ರೀ ವಸಂತ್ ಅವರು ರಸ್ತೆಯ ಮೇಲೆ ಹರಿಯುತ್ತಿದ್ದ ಹಾವನ್ನು ಗಮನಿಸಿದ್ದಾರೆ. ಅದನ್ನು …

ಧಾರವಾಡ: ವಿಪತ್ತು ನಿರ್ವಹಣಾ ಸ್ವಯಂಸೇವಕರಿಂದ ಸ್ವಚ್ಚತಾ ಕಾರ್ಯಕ್ರಮ

Janajagurthi Vedike News

ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಓಣಿಯ ಸ್ವಚ್ಚತಾ ಸೇವಾಕಾರ್ಯ ನಡೆಸಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ವಿಪತ್ತು ನಿರ್ವಹಣೆ ಸಂಯೋಜಕಿ ಪೂಜಾ ಪಾಟೀಲ್ ಅವರ ನೇತ್ರತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆದಿದ್ದು ಸ್ವಯಂಸೇವಕರಾದ ನೇತ್ರಾವತಿ, ನಾಗರಾಜ್, ಸುಭಾಷ್, ಪೂಜಾ, ಪ್ರೀತಿ, ರೇಣುಕಾ, ಸಾಹಿಲ್ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ಗಿಡಗಳನ್ನು ವಿತರಣೆ ಮಾಡಲಾಯಿತುಇವರು ನಡೆದಿದೆ ಸೇವಾಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.