About Us
ನೂತನ ರಾಜ್ಯಾಧ್ಯಕ್ಷರ ನೇಮಕ
ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಿನಾಂಕ: 17.09.2022 ರಂದು ನಡೆದ ರಾಜ್ಯ ಜನಜಾಗೃತಿ ವೇದಿಕೆಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸಿರುವ ಶ್ರೀ ವಿ. ರಾಮಸ್ವಾಮಿಯವರು ಶ್ರೀ ಮಲ್ಲಿಕಾರ್ಜುನ ಮೂ. ರಾಜಣ್ಣ ಕೊರವಿಯವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿರುತ್ತಾರೆ.
ಅಧ್ಯಕ್ಷರ ಮಾತುಗಳು:
“ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾದ್ಯಕ್ಷರಾಗಿ 3 ವರ್ಷಗಳ ಕಾಲ ವೇದಿಕೆಯನ್ನು ಮುನ್ನಡೆಸಿ ಸಾಧನೆಗೈದ ಶ್ರೀ ವಿ.ರಾಮಸ್ವಾಮಿಯವರ ಅವಧಿಯು ಪೂರ್ಣಗೊಂಡಿದ್ದು ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ವೃತ್ತಿಯಲ್ಲಿ ವಕೀಲರಾಗಿರುವ ಶ್ರೀ ಮಲ್ಲಿಕಾರ್ಜುನ ಮೂ. ರಾಜಣ್ಣ ಕೊರವಿಯವರು 2022-24 ನೇ ಸಾಲಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. 2022 ರಲ್ಲಿ ಮೂರನೇ ಬಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದರು. ಉತ್ತರ ಕರ್ನಾಟಕ ಪ್ರಸಿದ್ಧ ಚೆಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿಯ ವ್ಯಾಪಾರಸ್ಥರ ಸಂಘದ ಸದಸ್ಯರಾಗಿ, ಹೊಸ ದೆಹಲಿ ಭಾರತ ಕೃಷಿ ಸಮಾಜದ ಸದಸ್ಯರಾಗಿ, ಉಣಕಲ್ ಶ್ರೀ ಸದ್ಗುರು ಸಿದ್ಧೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ ಸೇವೆಯನ್ನು ಮಾಡಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಪ್ರತಿ ವರ್ಷ ಉಚಿತವಾಗಿ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಡಾ| ಎಂ.ಎ ಜೋಶಿಯವರೊಂದಿಗೆ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕನಿಷ್ಠ 4,000 ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಅದೇ ರೀತಿ ರಕ್ತದಾನ ಶಿಬಿರವನ್ನು ಪ್ರತಿ ವರ್ಷ ನಿರ್ಮಲಾ ಫೌಂಡೇಶನ್ ಎನ್.ಜಿ.ಒ ಮುಖಾಂತರ ಮಾಡುತ್ತಾ ಬಂದಿದ್ದಾರೆ. ಕಳಸಾ ಬಂಡೂರ ನಾಲಾ ಜೊಡಣಗೊಂಡರೆ ಉತ್ತರ-ಕರ್ನಾಟಕ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ ಎಂದು ಹಲವಾರು ದಶಕಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ.
ಹಿರಿಯರ ಮಾರ್ಗದರ್ಶನವನ್ನು ಪಡೆದು, ತಮ್ಮೆಲ್ಲರ ಸಹಕಾರದೊಂದಿಗೆ ವೇದಿಕೆಯ ಮೂಲಕ ನಡೆಸಲ್ಪಡುವ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿ ಶ್ರೀ ರಾಮಸ್ವಾಮಿಯವರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರ ಸಹಕಾರವನ್ನು ಯಾಚಿಸಿದರು.
ವಂದನೆಗಳೊಂದಿಗೆ
ಇತೀ ತಮ್ಮವನೇ
ಶ್ರೀ ಮಲ್ಲಿಕಾರ್ಜುನ ಮೂ. ರಾಜಣ್ಣ ಕೊರವಿ ,
ರಾಜ್ಯಾಧ್ಯಕ್ಷರು