ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ ನಡೆದ 241 ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ವಿವೇಕ್ ವಿ. ಪಾಯಸ್ ರವರು ನಡೆಸಿಕೊಟ್ಟಿರುತ್ತಾರೆ. ಕಾರ್ಯಕ್ರಮದಲ್ಲಿ ಜನಜಾಗೃತಿ ವಿಭಾಗದ ಆಡಳಿತ ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ, ಜಾಗೃತಿ ಸೌಧದ ಪ್ರಬಂಧಕರಾದ ಶ್ರೀ ಕಿಶೋರ್ ಕುಮಾರ್, ಶಿಬಿರದ ಆಪ್ತ ಸಲಹೆಗಾರರಾದ ಶ್ರೀ ಮಧು ಜಿ. ಆರ್., ಶಿಬಿರಾಧಿಕಾರಿ ವಿದ್ಯಾದರ್ ಮತ್ತು ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಸೌಮ್ಯ ಮತ್ತು ನವಜಿವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
