ಸವದತ್ತಿ ತಾಲೂಕಿನಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಸವದತ್ತಿ ತಾಲೂಕಿನಲ್ಲಿ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಚಿದಂಬರ ವಾರಿ ಕರಿ ಸಂಸ್ಥಾನ ರಾಜರಾಮ ಮಠ ಗುರ್ಲಹೊಸೂರು ಇದರ ಪೀಠಾಧಿಪತಿಗಳಾದ ಶ್ರೀ ಸದಾನಂದ ದೀಕ್ಷಿತರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರಾದ ಶ್ರೀ ಎಚ್. ಆರ್. ಲವ ಕುಮಾರ, ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಷ್ ಹನಸಿ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಈಶ್ವರ್ ಕರಿಕಟ್ಟಿ, ಧಾರವಾಡ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ಭಾಸ್ಕರ್ ಏನ್., ಒಕ್ಕೂಟದ ಉಪಾಧ್ಯಕ್ಷರಾದ ಶೋಭಾ ಬಟಕುರ್ಕಿ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ಸುಬ್ರಾಯ್ ಹೆಗಡೆ, ವಲಯದ ಮೇಲ್ವಿಚಾರಕರಾದ ಶ್ರೀ ಗುರು, ಜನಜಾಗೃತಿ ಮೇಲ್ವಿಚಾರಕ ಶ್ರೀ ಉಮೇಶ್ ಮತ್ತು ನವಜೀವನ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.