ಬೇಲೂರು ತಾಲೂಕಿನಲ್ಲಿ ಗಾಂಧಿಜಯಂತಿ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಬೃಹತ್ ಜನಜಾಗೃತಿ ಜಾಥ ಕಾರ್ಯಕ್ರಮ

Janajagurthi Vedike News

ಹಾಸನ ಜಿಲ್ಲಾ ವ್ಯಾಪ್ತಿಯ ಬೇಲೂರು ತಾಲೂಕಿನಲ್ಲಿ ಗಾಂಧಿಜಯಂತಿ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಬೃಹತ್ ಜನಜಾಗೃತಿ ಜಾಥ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ| ನವೀನ್ ಚಂದ್ರ ಶೆಟ್ಟಿ ಸಕಲೇಶಪುರ ರವರು ವಹಿಸಿದ್ದರು. ಜನಜಾಗೃತಿ ಜಾಥ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷರಾದ ಸತೀಶ್ ವನ್ನ ಒಳ್ಳೆಯವರು ಚಾಲನೆ ನೀಡಿದರು. ಬೇಲೂರು ತಾಲೂಕಿನ ಜನಪ್ರಿಯ ಶಾಸಕರಾದ ಎಚ್ ಕೆ ಸುರೇಶ್ ಹುಲ್ಲಹಳ್ಳಿ ನಮ್ಮ ದುಶ್ಚಟಗಳು ಮಾತ್ರವಲ್ಲ ನಮ್ಮ ಮನಸ್ಸಿನಲ್ಲಿರುವ ದುಷ್ಟ ಆಲೋಚನೆ, ಜಾತಿ ಭೇದ ಎಲ್ಲಾ ಮರೆತು ಉತ್ತಮ ಮನುಷ್ಯರಾಗಿ ಬಾಳೋಣ ಎಂದು ತಿಳಿಸಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳು ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಯ್ಸ್ರ
ವರು ಕಾರ್ಯಕ್ರಮದ ಆಶಯ ನುಡಿಗಳನ್ನು ನುಡಿದರು. ಮುಖ್ಯ ಅತಿಥಿಯಾಗಿ ಬೇಲೂರಿನ ದಂಡಾಧಿಕಾರಿ ಶ್ರೀಮತಿ ಮಮತಾ ಮೇಡಂ ಧರ್ಮಸ್ಥಳ ಗ್ರಾಮಾಭಿವ್ಯದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಜಯರಾಮ್ ನೆಲ್ಲಿತಾಯ, ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಸೋಮಣ್ಣರವರು ರವರು ಭಾಗವಹಿಸಿ, ಜನಜಾಗ್ರತಿ ವೇದಿಕೆಯ ಮೂಲಕ ನಡೆಸ್ಪಡುವ ಮದ್ಯವರ್ಜನ ಶಿಬಿರಗಳಲ್ಲಿ ಬಾಗವಹಿಸಿದ ಸದಸ್ಯರ ಬದುಕು ಬದಲಾದ ಬಗ್ಗೆ ತಿಳಿಸಿ, ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಬಾಗವಹಿಸಿ, ಮಾಹಿತಿ ಪಡೆದು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿರುವ ದುಶ್ಚಟಗಳನ್ನು ದೂರ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜನಜಾಗ್ರತಿ ವೇದಿಕೆಯ ಸದಸ್ಯರು ಗಳು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ನಿರ್ದೇಶಕರಾದ ಶ್ರೀಮತಿ ಮಮತಾ ಹರೀಶ್ ರಾವ್ , ಜನಜಾಗೃತಿಯ ಯುವಜನಾಧಿಕಾರಿ , ಹಾಗೂ ಹಾಸನ ಜಿಲ್ಲೆಯ 6ತಾಲ್ಲೂಕಿನ ಯೋಜನಾಧಿಕಾರಿ, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ಘಟಕ ಸದಸ್ಯರು , ಸೇವಾಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾದಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.