ಹುಬ್ಬಳ್ಳಿ ತಾಲೂಕಿನ ಸಿದ್ದಾರೂಢಮಠ ವಲಯದಲ್ಲಿ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮ

Janajagurthi Vedike News

ಹುಬ್ಬಳ್ಳಿ ತಾಲೂಕಿನ ಸಿದ್ದಾರೂಡ ಮಠ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಹುಬ್ಬಳ್ಳಿ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ.) ಧಾರವಾಡ, ಸಕ್ರಿ ಕಾನೂನು ಮಹಾವಿದ್ಯಾಲಯ ಹಾಗೂ ಶ್ರೀ ಮಂಜುನಾಥೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರದೀಪ್ ಶೆಟ್ಟಿ ರವರು ಮಾತನಾಡಿ ಪೂಜ್ಯ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಂತಹ ಜನಜಾಗೃತಿ ಕಾರ್ಯಕ್ರಮದ ಮೂಲಕ, ಮದ್ಯವರ್ಜನ ಶಿಬಿರ, ಮಾದಕ ವಸ್ತುಗಳ ವಿರೋಧಿ ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೊಜಿಸುತ್ತಾ ಸಮಾಜ ಇಂತಹ ವ್ಯಸನಕ್ಕೆ ಒಳಗಾಗಬಾರದೆಂದು ಪರಿವರ್ತನೆ ಮಾಡುತ್ತೀದ್ದೆವೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಇದರ ರಾಜಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ “ಮಾದಕ ವಸ್ತುಗಳ ವಿರೋಧಿ ದಿನಾಚರಣೆ” ಕಾರ್ಯಕ್ರಮದಲ್ಲಿ ಪೂಜ್ಯ ಡಾ| ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಇಂತಹ ಜನಜಾಗೃತಿ ಕಾರ್ಯಕ್ರಮದ ಮಾಡುವುದರೊಂದಿಗೆ ಜನರಿಗೆ ಜಾಗೃತಿ ಮುಡಿಸುವುದು ಅವರ ಉದ್ದೇಶವಾಗಿದೆ. ಆದ್ದರಿಂದ ಇತ್ತಿಚಿನ ದಿನಗಳಲ್ಲಿ ಮಾದಕ ವ್ಯಸನಿಯ ದೈಹಿಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರ ಜೊತೆಯಲ್ಲಿ ಈಗಿನ ಸನ್ನಿವೇಶದಲ್ಲಿ ಯುವಕ ಯುವತಿಯರು ಅತಿ ಹೆಚ್ಚು ಮಾದಕ ವಸ್ತುಗಳು ಸ್ವಾಭಾವಿಕವಾಗಿ ಬಳಕೆ ಮಾಡುವುದರಿಂದ ಆರೊಗ್ಯದ ಮೇಲೆ, ಭವಿಷ್ಯದ ಮೇಲೆ ತುಂಬಾ ಸಮಸ್ಯೆ ಆಗುತ್ತದೆ. ಮದ್ಯಪಾನ, ಧೂಮಪಾನ, ಇನ್ನು ಇತ್ಯಾದಿಗಳ ಮೂಲಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ನಿಮ್ಮ ಜೀವನವನ್ನು ಉಳಿಸುವುದರ ಜೊತೆ ನಿಮ್ಮ ಕುಟುಂಬ ಹಾಗೂ ನಿಮ್ಮ ನೆರೆ ಹೊರೆಯವರಿಗೆ ತಿಳುವಳಿಕೆ ನೀಡುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಉಮೇಶ್ ಹಳ್ಳಿಕೇರಿ ರಕ್ತ ಭಂಡಾರ ಅಧಿಕಾರಿ, ಕ್ಯಾನ್ಸರ್ ರೊಗ ತಜ್ಞರು ನವನಗರ ಇವರು ಉಪಸ್ಥಿತರಿದ್ದು ವೈದ್ಯರ ಮೂಲಕ ಹಲವಾರು ಕಾಯಿಲೆಗಳಿಗೆ ನೀಡಲ್ಪಡುವ ಮಾತ್ರೆಗಳಲ್ಲಿ ಕೆಲವು ರೋಗಿಯು ದೂರು ಉಪಯೋಗದಿಂದ ಮಾದಕ ವಸ್ತುಗಳ ಬಳಕೆ ಮಾಡುವುದರಿಂದ ಆರೊಗ್ಯ, ಖಿನ್ನತೆ ಪ್ರಚೋದನೆಗಾಗಿ, ನೋವು ನಿವಾರಕವಾಗಿ, ಮಾನಸಿಕ ಸಂತೋಷಕ್ಕಾಗಿ ಪಾರ್ಟಿ ಸಮಾರಂಭಗಳ ಮೂಲಕ ಮದ್ಯಪಾನ ಮಾದಕ ವಸ್ತುಗಳ ಬಳಕೆ ಮಾಡುವುದರಿಂದ ತಮಗೆ ಮತ್ತು ಸಮಾಜದಲ್ಲಿ ದುಷ್ಪರಿಣಾಮ ಬಂದಿರುತ್ತದೆ ಆದುದರಿಂದ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಉತ್ತಮ ಭವಿಷ್ಯವನ್ನು ರೂಪಿಸಿರುವುದು ಪ್ರತಿಯೊಬ್ಬರ ಉದ್ದೇಶವಾಗಿರಬೇಕು. ಒಂದೊಮ್ಮೆ ಈ ವಸ್ತುಗಳ ಸೇವನೆಯಿಂದ ಸಮಸ್ಯೆಗೊಳಗಾದವರಿದ್ದಲ್ಲಿ ಶಿಘ್ರವೇ ಚಿಕಿತ್ಸೆ ಮತ್ತು ಸಲಹೆ ಪಡೆಯಬೇಕು ಎಂದು ಅರಿವು ಮೂಡಿಸುವ ಸಲುವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ಸಮಾಜದಲ್ಲಿ ಜಾಗೃತಿ ಮುಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು‌. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀಮತಿ ರೂಪಾ ಇಂಗಳಹಳ್ಳಿ ಪ್ರಾರ್ಚಾರರು ಸಕ್ರಿ ಕಾನೂನು ಮಹಾವಿದ್ಯಾಲಯ, ಯೋಜನಾಧಿಕಾರಿಗಳಾದ ಶ್ರೀಮತಿ ಲೀಲಾಮೂರ್ತಿ ಚೌಟರ್, ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.