ವಿಪತ್ತು ನಿರ್ವಹಣಾ ಸ್ವಯಂಸೇವಕರ ಗುರುಲಿಂಗ ಇವರಿಂದ ಉರಗ ಕಾರ್ಯಾಚರಣೆ

Janajagurthi Vedike News

ಅಥಣಿ, ಅಗಸ್ಟ್ 26: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ ಅಥಣಿಯ ಉರಗ ತಜ್ಞ ಶ್ರೀ ಗುರುಲಿಂಗ ಶಂಕೆ ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.

ಶಿರುಗುಪ್ಪಿ ಗ್ರಾಮದ ಶ್ರೀಕಾಂತ್  ಸಳ್ಳಕೋಡ ಅವರ ತೋಟದ ಮನೆಯ ಹತ್ತಿರ ಹಾವೊಂದು ಕಂಡುಬಂದಿತ್ತು. ಅಪಾಯಕಾರಿಯಂತೆ ಕಂಡುಬರುತ್ತಿರುವ ಈ ಹಾವು ಕಣ್ಣಿಗೆ ಗೋಚರವಾಗುತ್ತಿದ್ದಂತೆ  ಶ್ರೀಕಾಂತ್ ಅವರು ಶ್ರೀ ಧರ್ಮಸ್ಥಳ ಸೇವಾ ಘಟಕದ ಸ್ವಯಂಸೇವಕ ಗುರುಲಿಂಗ ಶಂಕೆ ಅವರಿಗೆ ದೂರವಾಣಿ ಕರೆ ಮಾಡಿದ್ದರು. ತಕ್ಷಣ ಸ್ಪಂದಿಸಿದ ಇವರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಹತ್ತಿರದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದ ಇವರ ಸೇವಾಕಾರ್ಯಕ್ಕೆ ಸುತ್ತಮುತ್ತಲಿನ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ