About Us
ನೂತನ ರಾಜ್ಯಾಧ್ಯಕ್ಷರ ನೇಮಕ
ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಿನಾಂಕ: 10.01.2025 ರಂದು ನಡೆದ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ಸಮಾವೇಶದಲ್ಲಿ ಕಳೆದ 2 ವರ್ಷ 3 ತಿಂಗಳುಗಳ ಕಾಲ ಸೇವೆ ಸಲ್ಲಿಸಿರುವ ಶ್ರೀ ರಾಜಣ್ಣ ಮೂ. ಕೊರವಿಯವರು ಶ್ರೀ ನಟರಾಜ್ ಬಾದಾಮಿಯವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿರುತ್ತಾರೆ.
ಅಧ್ಯಕ್ಷರ ಮಾತುಗಳು :-
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾದ್ಯಕ್ಷರಾಗಿ 2 ವರ್ಷ 3 ತಿಂಗಳುಗಳ ಕಾಲ ವೇದಿಕೆಯನ್ನು ಮುನ್ನಡೆಸಿ ಸಾಧನೆಗೈದ ಶ್ರೀ ರಾಜಣ್ಣ ಮೂ. ಕೊರವಿಯವರ ಅವಧಿಯು ಪೂರ್ಣಗೊಂಡಿದ್ದು. ಮೂಲತ: ಆಭರಣ ವ್ಯಾಪಾರಿಗಳಾದ ಶ್ರೀ ನಟರಾಜ್ ಬಾದಾಮಿಯವರು 2024-26 ನೇ ಸಾಲಿಗೆ ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಇವರು ಬಹುಮುಖ ಪ್ರತಿಭೆಯ ಸಮಾಜ ಸೇವಕರು. ಯೋಜನೆಯು ಬಳ್ಳಾರಿ ಜಿಲ್ಲೆಯಲ್ಲಿ ಪ್ರಾರಂಭವಾದಾಗ ಜಿಲ್ಲಾ ವೇದಿಕೆಯ ಪ್ರಥಮ ಅಧ್ಯಕ್ಷರಾಗಿ ಇವರು ಸೇವೆ ನೀಡಿರುತ್ತಾರೆ. ಶಿಬಿರ ಸಮಿತಿಯ ಅಧ್ಯಕ್ಷರಾಗಿ, ಕೃಷಿ ಉತ್ಸವದ ಅಧ್ಯಕ್ಷರಾಗಿ, ಸ್ವಾಸ್ಥ ಸಂಕಲ್ಪ ತರಬೇತುದಾರರಾಗಿ, ಮಂಜುವಾಣಿ ಪತ್ರಿಕೆಯ ಏಜೆಂಟ್ ಆಗಿ, ನಿರಂತರ ಕ್ಷೇತ್ರದ ಬಾಂಧವ್ಯವನ್ನು ಇಟ್ಟುಕೊಂಡು ಸೇವೆ ನೀಡುವ ಕ್ಷೇತ್ರದ ಪರಮ ಭಕ್ತರಾಗಿರುತ್ತಾರೆ. ಸ್ಥಳೀಯ ಜೆಸಿಐ, ಛೇಂಬರ್ ಆಫ್ ಕಾಮರ್ಸ್, ಪ್ರಾಣಿ ದಯಾ ಸಂಘ ಮುಂತಾದ ಸಂಘಟನೆಯಲ್ಲಿದ್ದು, ಸಮಾಜ ಸೇವೆ ನೀಡಿರುತ್ತಾರೆ.
"ಹಿರಿಯರ ಮಾರ್ಗದರ್ಶನವನ್ನು ಪಡೆದು, ತಮ್ಮೆಲ್ಲರ ಸಹಕಾರದೊಂದಿಗೆ ವೇದಿಕೆಯ ಮೂಲಕ ನಡೆಸಲ್ಪಡುವ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿ ಶ್ರೀ ರಾಜಣ್ಣ ಮೂ. ಕೊರವಿಯವರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರ ಸಹಕಾರವನ್ನು ಯಾಚಿಸಿದರು.
ವಂದನೆಗಳೊಂದಿಗೆ
ಇತೀ ತಮ್ಮವನೇ
ಶ್ರೀ ನಟರಾಜ್ ಬಾದಾಮಿ
ರಾಜ್ಯ ಸಂಘಟನಾ ಅಧ್ಯಕ್ಷರು