ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 244 ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯರು ಆಗಮಿಸಿ 76 ಮಂದಿ ಶಿಬಿರಾರ್ಥಿಯವರನ್ನು ಉದ್ದೇಶಿಸಿ ಮಾತನಾಡುತ್ತಾ ಮದ್ಯವರ್ಜನ ಶಿಬಿರದ ಮೂಲಕ ಶಿಬಿರಾರ್ಥಿಗಳಿಗೆ ಪ್ರೇರಣೆ ಕೊಟ್ಟು ಮನಃಪರಿವರ್ತನೆ ಮಾಡಲಾಗುತ್ತಿದೆ. ಕೆಟ್ಟ ಅಭ್ಯಾಸಗಳು ಮನುಷ್ಯನನ್ನು ಸುಲಭವಾಗಿ ಅಂಟಿಕೊಳ್ಳುತ್ತದೆ, ಆದರೆ ಅದನ್ನು ಬಿಡಲು ಕಷ್ಟಪಡಬೇಕಾಗುತ್ತದೆ. ದುಶ್ಚಟ ಯಾರು ಸಹ ಗೊತ್ತಿದ್ದು ಪ್ರಾರಂಭ ಮಾಡುವುದಿಲ್ಲ, ಹೊರತಾಗಿ ಗೊತ್ತಿಲ್ಲದೆ ಯಾವುದೋ ಕಾರಣಕ್ಕಾಗಿ ಪ್ರಾರಂಭವಾದ ಮದ್ಯಪಾನ ಎಂಬ ಕೆಟ್ಟ ಚಟವನ್ನು ದೂರ ಮಾಡಿದರೆ ಬೇರೆ ಎಲ್ಲ ಕೆಟ್ಟ ಅಭ್ಯಾಸಗಳು ದೂರವಾಗಲು ಸಾಧ್ಯ. ಕುಡಿತ ಬಿಟ್ಟ ಮೇಲೆ ಎಚ್ಚರಿಕೆಯಿಂದ ಇರುವುದರಿಂದ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ಶ್ರೀ ವಿವೇಕ್ ವಿ. ಪಾಯಸ್, ಆಡಳಿತ ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ, ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕರು, ಆಪ್ತಸಮಾಲೋಚಕರು ಮತ್ತು ಜಾಗೃತಿ ಸೌಧದ ಪ್ರಬಂಧಕರು ಉಪಸ್ಥಿತರಿದ್ದರು.
