ಕಿತ್ತೂರು ತಾಲೂಕಿನ ಗುರು ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಕಿತ್ತೂರು ತಾಲೂಕಿನ ಗುರು ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಎನ್. ಜೆ. ವಸ್ತ್ರದ, ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಎ. ಕೆ. ಚಿಕ್ಕಮಠ, ತಾಲ್ಲೂಕಿನ ಯೋಜನಾಧಿಕಾರಿ ಶ್ರೀಯುತ ಸಂದೀಪ್ ಡಿ., ಹಾಗೂ ಶಾಲೆಯ ಸಹ ಶಿಕ್ಷಕರಾದ ಐ. ಕೆ. ಅಂಗಡಿ, ಎಸ್.ಎಸ್. ಅಕ್ಕನ್ನವರ ಮತ್ತು ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿ, ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಪ್ರಾಸ್ತಾವಿಕವಾಗಿ ಯೋಜನಾಧಿಕಾರಿಗಳು ಮಾತನಾಡಿ ವಿದ್ಯಾರ್ಥಿಗಳ ಉತ್ತಮ ಹವ್ಯಾಸ ಹಾಗೂ ದುರಭ್ಯಾಸ ಮುಕ್ತ ಜೀವನದ ರೀತಿಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಎ. ಕೆ. ಚಿಕ್ಕಮಠ ರವರು ಪ್ರೌಡ ಶಾಲೆಯ ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಯಾವವು, ದುಶ್ಚಟಗಳು ಯಾವುದು ಹೇಗೆ ನಾವು ಅವಗಳಿಂದ ದೂರ ಇರಬೇಕು ಮನೆಯ ಹಿರಿಯರಿಗೆ, ಶಾಲೆಯ ಗುರುಗಳಿಗೆ ಹೇಗೆ ಗೌರವ ಕೊಡಬೇಕು ಎಂದು ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಸ್ವಾಸ್ತ್ಯ ಸಂಕಲ್ಪ ಪ್ರತಿಜ್ಞೆ ಮಾಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಕುರಿತು ಶುಭ ನುಡಿ ನುಡಿದರು.