242 ನೇ ವಿಶೇಷ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ “ಜಾಗೃತಿಸೌಧ” ದಲ್ಲಿ 242 ನೇ ವಿಶೇಷ ಮದ್ಯವರ್ಜನ ಶಿಬಿರ (1908 ನೇ ರಾಜ್ಯ ಮಟ್ಟದ ಶಿಬಿರ) ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಬಿರದ ವೈದ್ಯಾಧಿಕಾರಿ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ವೈದ್ಯರಾದ ಡಾ. ಶ್ರೀ ಮೋಹನದಾಸ ಗೌಡ ಇವರು ನೆರವೇರಿಸಿದರು. ಶ್ರೀ ಮಾಧವ ಗೌಡ ಮಾನ್ಯ ಯೋಜನಾಧಿಕಾರಿ ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇವರು ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ಹಾದಿ ಮತ್ತು ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳು, ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕಿಶೋರ್ ಕುಮಾರ್ ಪ್ರಬಂಧಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಆಪ್ತ ಸಮಾಲೋಚಕರಾದ ಶ್ರೀ ಮಧು, ಶಿಬಿರಾಧಿಕಾರಿಗಳಾದ ಶ್ರೀ ನಂದಕುಮಾರ್ ಪಿ. ಪಿ., ಶ್ರೀ ರಮೇಶ್, ಶ್ರೀ ವಿದ್ಯಾಧರ್, ಶ್ರೀ ಕುಮಾರ್, ಆರೋಗ್ಯ ಸಹಾಯಕರಾದ ಶ್ರೀ ವೆಂಕಟೇಶ್, ಶ್ರೀಮತಿ ಪ್ರೆಸಿಲ್ಲಾ ಡಿಸೋಜ, ಶ್ರೀಮತಿ ನೇತ್ರಾವತಿ, ಕು.ರಂಜಿತಾ ಇವರುಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ವಿಶೇಷ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳು ಭಾಗವಹಿಸಿದ್ದರು. ನವಜೀವನ ಸಮಿತಿಯ ಸದಸ್ಯರುಗಳು ತಮ್ಮ ವೈಯಕ್ತಿಕ ಪರಿಚಯದೊಂದಿಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಶೋಧನಾ ಕೇಂದ್ರದ ಸಿಬ್ಬಂದಿಗಳು, ಸ್ವಯಂ ಸೇವಕರು ಮತ್ತು ನವಜೀವನ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.