ಧಾರವಾಡ ಪ್ರಾದೇಶಿಕ ವಿಭಾಗದ ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಕಲ್ಯಾಣ ಕುಮಾರ ಶೆಟ್ಟರ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರು ಶ್ರೀ ಮುತ್ತಣ್ಣ ಎಲಿಗಾರ ಹಾಗೂ ಗೌರವಾನ್ವಿತ ಸರ್ವ ಸದಸ್ಯರು ವೇದಿಕೆಯ ಬೆಳವಣಿಗೆಗೆ ಪೂರಕವಾದ ರೀತಿಯಲ್ಲಿ ಆರೋಗ್ಯಕರ ಚರ್ಚೆಯಲ್ಲಿ ಭಾಗವಹಿಸಿ ವರದಿ ವರ್ಷದ ಕಾರ್ಯಕ್ರಮಗಳ ಅನುಷ್ಠಾನ, ಬಾಕಿ ಉಳಿದ ಕಾರ್ಯಕ್ರಮಗಳ ಕುರಿತು ವಿಮರ್ಶೆ, ಮುಂದಿನ ವರ್ಷದ ಕ್ರಿಯಾಯೋಜನೆಯ ಕಾರ್ಯಕ್ರಮ, ಯೋಜನೆಯ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಕುರಿತು, ಜನಜಾಗೃತಿ ಸದಸ್ಯರ ಸಂಪೂರ್ಣ ಸುರಕ್ಷಾ, ಜನಜಾಗೃತಿ ಸದಸ್ಯರ ಅಂತಿಮ ಪಟ್ಟಿಯನ್ನು ದೃಢಪಡಿಸಲಾಯಿತು. ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕ್ಷೇತ್ರ ಯೋಜನಾಧಿಕಾರಿಗಳು, ಜಿಲ್ಲಾ MIS ಯೋಜನಾಧಿಕಾರಿಗಳು ಮತ್ತು ಅಡಿಟ್ ಪ್ರಬಂಧಕರು ಉಪಸ್ಥಿತರಿದ್ದರು.
