ಸುಳ್ಯ ತಾಲೂಕಿನಲ್ಲಿ ಹೆಚ್ಚು ಮದ್ಯವರ್ಜನ ಶಿಬಿರಗಳು ನಡೆದಿದ್ದು. ಅತೀ ಹೆಚ್ಚು ನವಜೀವನ ಸದಸ್ಯರು ಈ ಭಾಗದಲ್ಲಿದ್ದು ತಮ್ಮ ತಮ್ಮ ಜೀವನವನ್ನು ಸುಧಾರಿಸಿಕೊಂಡು ಅತ್ಯುತ್ತಮ ಬೆಳವಣಿಗೆಯನ್ನು ಹೊಂದಿರುತ್ತಾರೆ. ಶ್ವೇತ ವರ್ಣದ ವಸ್ತ್ರವನ್ನು ಧರಿಸಿರುವ ಜೊತೆಗೆ ಎಲ್ಲರ ಮನಸ್ಸು ಕೂಡ ಶುದ್ಧೀಕರಣ ಆಗಲಿ. ಇವತ್ತು ಪ್ರಜ್ವಲಗೊಂಡಿರುವ ದೀಪ ಸಭಾ ವೇದಿಕೆಗಷ್ಟೇ ಸೀಮಿತವಾಗಿರದೆ ಪ್ರತಿಯೊಬ್ಬರ ಕುಟುಂಬದಲ್ಲಿ ಇನ್ನಷ್ಟು ಬೆಳಕು ಚೆಲ್ಲಲಿ ಎಂದು ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಲೋಕನಾಥ್ ಅಮೆಚೂರು ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಸುಳ್ಯ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಯೋಜನಾ ಕಛೇರಿಯಲ್ಲಿ ನಡೆದ ನವಜೀವನ ಸದಸ್ಯರ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಮಾಧವ ಗೌಡ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಇವರು ತಾಲೂಕಿನಲ್ಲಿ 2006 ನೇ ಇಸವಿಯಿಂದ ಮದ್ಯವರ್ಜನ ಶಿಬಿರಗಳು ಯಶಸ್ವಿಯಾಗಿ ನಡೆಯುತ್ತಿದೆ. ಇದುವರೆಗೆ 48 ಮದ್ಯವರ್ಜನ ಶಿಬಿರಗಳನ್ನು ನಡೆಸಿ 3000 ಕ್ಕೂ ಮಿಕ್ಕಿ ಮದ್ಯ ವ್ಯಸನಿಗಳಿಗೆ ಮನಃಪರಿವರ್ತನೆಯ ಚಿಕಿತ್ಸೆ ನೀಡಿ ವ್ಯಸನಮುಕ್ತಗೊಳಿಸಲಾಗಿದೆ. ಪಾನಮುಕ್ತರಾದವರೆಲ್ಲರೂ ಅಸಾಮಾನ್ಯ ಸಾಧನೆಯನ್ನು ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ತಾವುಗಳೆಲ್ಲರು ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿ ಸಹಕರಿಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ನವಜೀವನ ಸದಸ್ಯರಾದ ಶ್ರೀ ನಿಂಗಪ್ಪ ಉಬರಡ್ಕ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಮಾಧವ ಗೌಡ ಆಡಳಿತಾತ್ಮಕ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಇವರು ಮಾತನಾಡಿ ಸುಳ್ಯ ತಾಲೂಕಿನಾದ್ಯಂತ ಜನಜಾಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರ, ಇತರ ಕಾರ್ಯಕ್ರಮ ಹಾಗೂ ನವಜೀವನ ಸದಸ್ಯರ ಅನುಪಾಲನೆ ತುಂಬಾ ಅರ್ಥಪೂರ್ಣವಾಗಿ ನಡೆಯುತ್ತಿರುವುದು ವಿಶೇಷ. 2023 ನೇ ಇಸವಿಯಲ್ಲಿ ಅಜ್ಜಾವರದಲ್ಲಿ ನಡೆದ ಮದ್ಯವರ್ಜನ ಶಿಬಿರ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀ ಗಣೇಶ್ ಆಚಾರ್ಯ ಯೋಜನಾಧಿಕಾರಿ ಜನಜಾಗೃತಿ ಪ್ರಾದೇಶಿಕ ವಿಭಾಗ ಉಡುಪಿ ಇವರು ಮಾತನಾಡಿ ವಲಯಕ್ಕೊಂದರಂತೆ ನವಜೀವನ ಸಮಿತಿಗಳನ್ನು ರಚಿಸಿ ಸಮಿತಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರ ಮೂಲಕ ತಾಲೂಕಿನಲ್ಲಿ ಕಾರ್ಯಕ್ರಮಗಳು ಆಯೋಜನೆ ಸಿಗುವಂತಾಗಬೇಕು ಎಂದರು. ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆ ಸದಸ್ಯರುಗಳಾದ ಶ್ರೀ ಪದ್ಮನಾಭ ಜೈನ್ ಮತ್ತು ಶ್ರೀ ಭಾಸ್ಕರ್ ಅಡ್ಕಾರ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿಗಳಾದ ಶ್ರೀ ನಂದಕುಮಾರ್ ಪಿ. ಪಿ., ಶ್ರೀ ವಿದ್ಯಾಧರ್, ಆರೋಗ್ಯ ಸಹಾಯಕಿಯರಾದ ಶ್ರೀಮತಿ ಪ್ರೆಸಿಲ್ಲಾ ಡಿ’ಸೋಜ, ಕುಮಾರಿ ರಂಜಿತಾ, ಜನಜಾಗೃತಿ ಮೇಲ್ವಿಚಾರಕ ಶ್ರೀ ನಿತೇಶ್, ಸುಳ್ಯ ವಲಯ ಮೇಲ್ವಿಚಾರಕಿ ಜಯಶ್ರೀ ಮತ್ತು ತಾಲೂಕಿನ ನವಜೀವನ ಪೋಷಕರು ಉಪಸ್ಥಿತರಿದ್ದರು.
