ಸಾಲಿಗ್ರಾಮ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ

Janajagurthi Vedike News

ಸಾಲಿಗ್ರಾಮ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಮುರುಳಿಧರ್ ಎಚ್. ಎಲ್. ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ
ಶ್ರೀ ಮುರಳಿಧರ್ ರವರು ಮಾತನಾಡಿ ಈಗಿನ ಮಕ್ಕಳು ಮಾದಕ ವಸ್ತುಗಳ ಬಳಕೆಯನ್ನು ವಿರೋಧಿಸುವುದು ಕಡ್ಡಾಯವಾಗಿದೆ ಈಗಿನ ಮಕ್ಕಳೇ ಮುಂದಿನ ಪ್ರಜೆಗಳು ನೀವು ಇವುಗಳ ವಿರುದ್ಧ ಹೋರಾಡಿದಲ್ಲಿ ಪ್ರಜಾಪ್ರಭುತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಲು ಸಾಧ್ಯವಾಗುತ್ತದೆ ಮಕ್ಕಳಲ್ಲಿ ಪ್ರತಿ ಕ್ಷಣದಲ್ಲೂ ದೇಶಪ್ರೇಮ ಇರಬೇಕು ಮತ್ತು ಅಭಿವೃದ್ಧಿ ಹೊಂದಿರುವ ಭಾರತ ದೇಶದಲ್ಲಿ ಬೇರೆ ಬೇರೆ ದೇಶಗಳು ಭಾರತದ ಯುವ ಜನತೆಯನ್ನು ಮಾದಕ ವಸ್ತುಗಳಿಂದ ಕೆಡುವ ಕೆಲಸ ಮಾಡುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ನೀವು ಜಾಗೃತರಾಗಿ ಇವುಗಳ ಬಳಕೆಯನ್ನು ನಿಷೇಧಿಸುವುದು ಕಡ್ಡಾಯವಾಗಿರುತ್ತದೆ ಎಂದು ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಉಪನ್ಯಾಸಕರಾದ ಶ್ರೀ ನಾಗರಾಜ್ ರವರು ಮಾತನಾಡಿ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ವಿರೋಧಿಸಿ ಅವುಗಳ ವಿರುದ್ಧ ಹೋರಾಟ ಮಾಡಿದಲ್ಲಿ ನಮ್ಮ ಕುಟುಂಬದ ಏಳಿಗೆ ಉತ್ತಮ ಆಗುತ್ತದೆಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಶೇಖರ್ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.