ಸಂಗಮೇಶ್ವರ ನಗರ ಕಾರ್ಯಕ್ಷೇತ್ರದ ಶ್ರೀ ಸಂತ ಕನಕದಾಸ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ವಲಯದ ಸಂಗಮೇಶ್ವರ ನಗರ ಕಾರ್ಯಕ್ಷೇತ್ರದ ಶ್ರೀ ಸಂತ ಕನಕದಾಸ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ನಾಗೇಶ್, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶ್ರೀ ಡಾ|| ವೀರೇಶ್ ಪಾಟೀಲ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶ್ರೀ ಶ್ರೀಶೈಲ್ ದೊಡ್ಡಮನಿ, ವಲಯದ ಮೇಲ್ವಿಚಾರಕರಾದ ಶ್ರೀ ಜಗದೀಶ್ ಸುರ್ವೆ, ಸೇವಾಪ್ರತಿನಿಧಿ ಶಮಿನಾ, ಒಕ್ಕೂಟದ ಉಪಾಧ್ಯಕ್ಷರು ಶಾಂತ ವಿ. ಹಡಲಗಿರಿ, ಶಾಲೆಯ ಶಿಕ್ಷಕರು ಹಾಗೂ 180 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.