ಶ್ರೀ ಧರ್ಮಸ್ಥಳ ಸೇವಾ ತಣ್ಣೀರುಪಂಥ ಘಟಕದ ಸ್ವಯಂಸೇವಕರಿಂದ ಐದು ಕಿಲೋಮೀಟರ್ ರಸ್ತೆಯ ಇಕ್ಕೆಲಗಳ ಸ್ವಚ್ಛತೆ

Janajagurthi Vedike News

ಗುರುವಾಯನಕೆರೆ, ಆಗಸ್ಟ್ 18: ಶ್ರೀ ಧರ್ಮಸ್ಥಳ   ಸೇವಾ ತಣ್ಣೀರುಪಂಥ ಘಟಕದ ಸ್ವಯಂಸೇವಕಿಯಾದ ಶ್ರೀಮತಿ ಶೋಭಾ ಕುಪ್ಪೆಟ್ಟಿ ಅವರು ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರಿಗೆ ಪ್ರೇರಣೆ ನೀಡಿ, ಅವರ ನೆರವಿನಿಂದ ಐದು ಕಿಲೋಮೀಟರ್ ಉದ್ದುಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

          ಕುಪ್ಪೆಟ್ಟಿಯಿಂದ ನೆಕ್ಕಿಲು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಪ್ರಮಾಣದಲ್ಲಿ ಹುಲ್ಲು, ಅನಾವಶ್ಯಕ ಗಿಡಗಳು, ಪೊದೆಗಳು ಬೆಳೆದಿದ್ದವು. ದಾರಿಹೋಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದ್ದ ಇದನ್ನು ಗಮನಿಸಿದ ಸ್ವಯಂಸೇವಕಿ ಶೋಭಾ ಅವರು ಅವುಗಳನ್ನು ತೆರವುಗೊಳಿಸಲು ನಿರ್ಧರಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರು ಭಾಗಿಯಾಗುವಂತೆ ಪ್ರೇರಣೆ ನೀಡಿರುತ್ತಾರೆ. ಸ್ವಯಂಸೇವಕಿ ಶೋಭಾ ಅವರ ಕಳಕಳಿಗೆ ಸ್ಪಂದಿಸಿದ ಚಾಮುಂಡೇಶ್ವರಿ ಸ್ವಸಹಾಯ ಸಂಘದ ಧನಂಜಯ್ ಹಾಗೂ ನವಶಕ್ತಿ  ಸಂಘದ ಸದಸ್ಯ ಕಿಶನ್ ಅವರು ಸೇವಾ ಕಾರ್ಯದಲ್ಲಿ ತೊಡಗಿ ಐದು ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ ಕೆಲಸ ಪೂರೈಸಿದ್ದಾರೆ. ಹುಲ್ಲು ಕತ್ತರಿಸುವ ಯಂತ್ರವನ್ನು ಪ್ರಶಾಂತ್ ಅವರು ನೀಡಿದ್ದಾರೆ. ಶೋಭಾ ಅವರ ನೇತ್ರತ್ವದಲ್ಲಿ ನಡೆದ ಸೇವಾ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.