ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ನಡೆದ ಪ್ರೇರಣ ಕಾರ್ಯಾಗಾರದಲ್ಲಿ ರಾಜ್ಯಾಧ್ಯಕ್ಷರಾದ ನಟರಾಜ ಬಾದಾಮಿ, ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್, ಕಾರಾಗೃಹದ ಅದಿಕ್ಷಕಾರಾದ ಡಾ. ರಂಗನಾಥ್ ಪಿ., ಶಕ್ತಿ ಫೌಂಡೇಶನ್ ಸ್ಥಾಪಕರಾದ ಅರ್ಜುನ್, ಯಶವಂತ್ ಗೌಡ, ಶಿವಮೊಗ್ಗ ಜಿಲ್ಲಾ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಪಾಲಕ್ಷಪ್ಪ, ಜಿಲ್ಲಾ ನಿರ್ದೇಶಕರು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಒಟ್ಟು 400 ಮಂದಿ ವಿಚಾರಣಾಧೀನ ಖೈದಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
