ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ 1805 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಶ್ರೀ ಶ್ರೀ ಶ್ರೀ ಡಾ| ಮುಮ್ಮಡಿ ನಿರ್ವಾಣ ಮಹಾಸ್ವಾಮಿಯವರ ಕೃಪಾಶೀರ್ವಾದಗಳೊಂದಿಗೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕನಕಪುರ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕನಕಪುರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ರಾಮನಗರ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರುಗಳ ಮಾರ್ಗದರ್ಶನದೊಂದಿಗೆ, ಶ್ರೀ ದೇಗುಲ ಮಠ ಕನಕಪುರ, ಪೊಲೀಸ್ ಇಲಾಖೆ ಮತ್ತು ತಾಲೂಕು ಆರೋಗ್ಯ ಕೇಂದ್ರ ಕನಕಪುರ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದೊಂದಿಗೆ ನಡೆದ 1805 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ದೇಗುಲ ಮಠದ ಮಹಾಲಿಂಗಸ್ವಾಮಿಗಳು ಶಿಬಿರಾರ್ಥಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ದುಶ್ಚಟದಿಂದ ದೂರವಿದ್ದು ಪಾನಮುಕ್ತರಾಗಿ ಸುಂದರ ಜೀವನವನ್ನು ಸಾಗಿಸಬೇಕು ಎಂದು ಪಾನಮುಕ್ತ ಕುಟುಂಬಕ್ಕೂ ಮತ್ತು ಎಲ್ಲರಿಗೂ ಶುಭ ಹಾರೈಸುವುದರ ಮೂಲಕ ಆಶೀರ್ವಚನ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ.) ಮೈಸೂರು ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಬಿ. ಜಯರಾಮ ನೆಲ್ಲಿತ್ತಾಯ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಒಡೆದ ಮಡಿಕೆ ಮಣ್ಣಾಗಬಹುದೇ ಒಡೆದ ಹಂಚಿನಿಂದ ಮಡಿಕೆ ಮಾಡಲಾಗದು, ಆದರೆ ಮದ್ಯ ವ್ಯಸನದಿಂದ ಹಾಳಾದ ಬದುಕನ್ನು ಈ ಶಿಬಿರದಿಂದ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ದುಶ್ಚಟದಿಂದ ದೂರವಿರಿ ಸುಖವಾದ ಸಂಸಾರವನ್ನು ರೂಪಿಸಿಕೊಳ್ಳಿ ನೆಮ್ಮದಿ ಜೀವನವನ್ನು ಸಾಗಿಸಿ ಎಂಬುವುದರ ಮೂಲಕ ಶುಭ ಹಾರೈಸಿದರು. ಮಾರ್ಕಂಡೇಯ ಪುರಾಣದ ಕಥೆಯ ಮೂಲಕ ಆದ್ಯಾತ್ಮಿಕ ಚಿಂತನೆಯನ್ನು ವಿವರಿಸಿದರು. ಶ್ರೀ ವಿ. ರಾಮಯ್ಯ ಅಧ್ಯಕ್ಷರು 1805 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಕನಕಪುರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಮಾತುಗಳೊಂದಿಗೆ ಮುಂದಿನ ಜೀವನ ಪಾನಮುಕ್ತವಾಗಿರಲಿ ಕುಟುಂಬದೊಂದಿಗೆ ಸುಖಕರ ಜೀವನ ನಡೆಸುವಂತೆ ಶುಭವನ್ನು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ (ರಿ.) ರಾಮನಗರ ಜಿಲ್ಲಾ ನಿರ್ದೇಶಕರಾದ ಶ್ರೀ ಜಯಕರ ಶೆಟ್ಟಿ , ಕನಕಪುರ ವಕೀಲರ ಸಂಘದ ಅಧ್ಯಕರಾದ ಶ್ರೀ ಚನ್ನೇಗೌಡ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಸಂತೋಷ್ ಹುಣಸನಹಳ್ಳಿ, ಕನಕಪುರ ಶ್ರೀ ವೆಂಕಟಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ಶ್ರೀ ಮಾದೇಗೌಡ, ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಸಂತೋಷ್ ಕೆ., ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಮಾಧವ್ ನಾಯಕ್, ಜನಜಾಗೃತಿ ಮೇಲ್ವಿಚಾರಕ, ಕನಕಪುರ ತಾಲ್ಲೂಕಿನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಸೇವಾಪ್ರತಿನಿಧಿಗಳು, ಒಕ್ಕೂಟದ ಪಧಾಧಿಕಾರಿಗಳು, ಸ್ವಸಹಾಯ ಸಂಘದ ಹಾಗೂ ಪ್ರಗತಿಬಂಧು ಸಂಘದ ಸದಸ್ಯರು, ನವಜೀವನ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.