ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ

Janajagurthi Vedike News

ಮೈಸೂರು ಪ್ರಾದೇಶಿಕ ವಿಭಾಗದ ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯ ಉದ್ಘಾಟನೆ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ಮಾನ್ಯ ಶ್ರೀ ನಟರಾಜ್ ಬಾದಾಮಿ, ಜನಜಾಗೃತಿ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷರಾದ ಶ್ರೀ ಕೆ. ಹನುಮಂತಯ್ಯ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀ ಲಿಂಗೇಗೌಡ, ಮೈಸೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯರಾಮ ನೆಲ್ಲಿತ್ತಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡ್ಯ ಜಿಲ್ಲಾ ನಿರ್ದೇಶಕರು, ಜನಜಾಗೃತಿ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಮತಿ ಚೇತನ ಮತ್ತು ಕೋಶಾಧಿಕಾರಿ ಶ್ರೀ ಚಂದ್ರು ಇವರ ಉಪಸ್ಥಿತಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, 06 ತಾಲೂಕು ಯೋಜನಾ ಕಛೇರಿಯ ಯೋಜನಾಧಿಕಾರಿಗಳು, ಎಂ ಐ ಎಸ್ ಯೋಜನಾಧಿಕಾರಿಗಳಾದ ಶ್ರೀ ರಾಘವೇಂದ್ರ ಎ., ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳು ಮತ್ತು ಮಂಡ್ಯ ಜಿಲ್ಲಾ ವಿಚಕ್ಷಣಾಧಿಕಾರಿಗಳಾದ ಶ್ರೀ ನಿತೇಶ್ ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕರು ಗತ ಸಭೆಯ ವರದಿ ಮಂಡನೆ ಮಾಡುದರೊಂದಿಗೆ ಉತ್ತಮ ರೀತಿಯ ಸಕರಾತ್ಮಕ ಚರ್ಚೆ ಸಭೆಯಲ್ಲಿ ನಡೆಯಿತು. ಪ್ರಾದೇಶಿಕ ನಿರ್ದೇಶಕರು ಸಭೆಯನ್ನು ಉದ್ದೇಶಿಸಿ ಜಿಲ್ಲೆಯಲ್ಲಿ ನವಜೀವನ ಸಮಿತಿಯ ಬಲಪಡಿಸುವಿಕೆ ಹಾಗೂ ಉತ್ತಮ ಸೇವೆ ನಮ್ಮ ತಂಡದಿಂದ ಸಮಾಜಕ್ಕೆ ಅರ್ಪಣೆಯಾಗಲಿ ಎಂದು ತಮ್ಮ ಮಾತಿನೊಂದಿಗೆ ಸಲಹೆ ನೀಡಿದರು. ಸಭೆಯಲ್ಲಿ ನಡೆದ ಚರ್ಚೆಗೆ ಉತ್ತಮ ರೀತಿಯ ಸಲಹೆಯನ್ನು ನೀಡುವುದರೊಂದಿಗೆ, ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕೈಗೊಂಡ ಈ ಪುಣ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಮ್ಮ ಪೂರ್ವಜನ್ಮ ಪುಣ್ಯ ಎಂದರು. ಬಳಿಕ ಯೋಜನೆ ಮತ್ತು ಜನಜಾಗೃತಿಯ ಎಲ್ಲಾ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣ ನಾವೆಲ್ಲ ಸೇರಿ ಜನರ ಸೇವೆಯನ್ನು ಮಾಡಿದ್ದಲ್ಲಿ ಅದು ಜನಾರ್ಧನನ ಸೇವೆಯಾಗುತ್ತದೆ ಎಂದು ಮನತುಂಬಿ ಮಾತಾಡಿದರು. ಪೂಜ್ಯರ ಬಗ್ಗೆ ಮತ್ತು ಕ್ಷೇತ್ರದ ಬಗ್ಗೆ ಅವಹೇಳನ ಮಾತುಗಳನ್ನಾಡುವ ಜನರಿಗೆ ಉತ್ತರ ಸಿಗಬೇಕಾದರೆ ಜನಜಾಗೃತಿ ವೇದಿಕೆಯ ಸೇವೆ ಮತ್ತು ಸಂಘಟನೆ ಭದ್ರವಾಗಬೇಕು ಎಂದು ನುಡಿದರು. ಮಂಡ್ಯ ಜಿಲ್ಲೆಯ ಜನಜಾಗೃತಿ ಪದಾಧಿಕಾರಿಗಳ ಉತ್ಸಾಹ ಇನ್ನಷ್ಟು ಹೆಚ್ಚಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಮಂಡ್ಯ ಜಿಲ್ಲೆಯ ಪದಾಧಿಕಾರಿಗಳ ಉತ್ಸಾಹಕ್ಕೆ ಹರ್ಷಪಟ್ಟರು. ಸಭೆಯ ಅಧ್ಯಕ್ಷರ ನೆಲೆಯಲ್ಲಿ ಸನ್ಮಾನ್ಯ ಶ್ರೀ ಕೆ. ಹನುಮಂತಯ್ಯ ರವರು ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಪೂಜ್ಯರ ವ್ಯವಸ್ಥೆಯ ಬಗ್ಗೆ ಒಳ್ಳೆಯ ವಿಚಾರವನ್ನು ಸಭೆಯಲ್ಲಿ ಮಂಡಿಸಿದರು.