ಚಿಂಚೋಳಿ ತಾಲೂಕಿನ ನಿಡಗುಂದ ವಲಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚಾರಣೆ ಕಾರ್ಯಕ್ರಮ

Janajagurthi Vedike News

ಚಿಂಚೋಳಿ ತಾಲೂಕಿನ ನಿಡಗುಂದ ವಲಯದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ (ರಿ.) ಅನುದಾನಿತ ಪ್ರೌಢ ಶಾಲೆ ಮತ್ತು ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚಾರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಶ್ರೀ ಗುರುನಾಥ್ ರಾಠೋಡ ರವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಗೋಪಾಲ ಜಿ. ಯೋಜನೆ ಕಾರ್ಯಕ್ರಮಗಳ ಬಗ್ಗೆ ಪೂಜ್ಯರ ಆಶಯಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದ್ಯಸ್ಯರಾದ ಶ್ರೀ ಮಾರುತಿ ಗಂಜಿಗೇರ ರವರು ಇಂದಿನ ಪೀಳಿಗೆ ಈ ದುಶ್ಚಟಗಳಿಗೆ ಯಾವ ರೀತಿ ಬಲಿಪಶು ಆಗಿದ್ದಾರೆ, ಕೊಕೀನ, ಮಾಫಿಯಾ ಬಳಕೆ ಮಾಡಿ ಅವರ ಜೀವನ ಹಾಳು ಮಾಡಿಕೊಂಡು ಸಮಾಜದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು ಇದರ ಬಗ್ಗೆ ಚಿಂತನೆ ಮಾಡಿ ತಂದೆ ತಾಯಿ ಕನಸು, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಅಳವಡಿಸಿಕೊಳ್ಳಬೇಕು, ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗ ಬಾರದೆಂದು ಹೇಳಿದರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಪನೆ ಮತ್ತು ಡಾ| ವೀರೇಂದ್ರ ಹೆಗ್ಗಡೆ ರವರು ಮತ್ತು ಮಾತೃಶ್ರೀ ಅಮ್ಮನವರ ಆಶಯದಂತೆ ನಾವೆಲ್ಲ ಈ ಮಾದಕ ವಸ್ತುಗಳ ಸೇವನೆ ವಿರುದ್ಧ ಹೋರಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು, ವಲಯದ ಮೇಲ್ವಿಚಾರಕರಾದ ಮಹಾದೇವಿ ಎಮ್. ಸೇವಾಪ್ರತಿನಿಧಿ ಗಂಗಾ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.