ಗ್ರಾಮದಲ್ಲಿ ಭೀತಿ ಮೂಡಿಸಿದ್ದ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಶ್ರೀ ಧರ್ಮಸ್ಥಳ ಸೇವಾ ಕಿಲ್ಲೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

Janajagurthi Vedike News

ಬೆಳ್ತಂಗಡಿ, ಆಗಸ್ಟ್ 19: ಕಿಲ್ಲೂರು ಗ್ರಾಮದ  ಜನರಿಗೆ ಬಹಳ ದಿನಗಳಿಂದ ಆಗಾಗ ಕಾಣಿಸಿಕೊಂಡು ತೊಂದರೆ ಕೊಡುತ್ತಿದ್ದ ಹಾವೊಂದನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ ‘ಶ್ರೀ  ಧರ್ಮಸ್ಥಳ ಸೇವಾ’ ಕಿಲ್ಲೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು. ಅನೆಕಂದೊಡಿ ಎಂಬ ಹಾವು ಆಗಾಗ್ಗೆ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಮಕ್ಕಳು, ಮನೆಮಂದಿಯೆಲ್ಲಾ ಭಯದಿಂದ ನಾಲ್ಕಾರು ದಿನಗಳನ್ನು ಕಳೆದಿದ್ದರು. ಸಮಸ್ಯೆಯನ್ನು ಅರಿತ ಶ್ರೀ ಧರ್ಮಸ್ಥಳ ಸೇವಾ ನಿರ್ವಹಣಾ ಘಟಕದ ಸ್ವಯಂಸೇವಕರಾದ ಶ್ರೀ ರತನ್ ಶೆಟ್ಟಿ ಹಾಗೂ ಶ್ರೀ ವಿನಯಚಂದ್ರ ಅವರು ಸ್ಥಳೀಯರಾದ ಶ್ರೀ  ಕೃಷ್ಣಪ್ಪ ಪೂಜಾರಿ, ಉಮೇಶ್ ಪೂಜಾರಿ ಹಾಗೂ ವಿಜಯ್ ಕಾಡುಮನೆ ಅವರ ನೆರವಿನಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿರುತ್ತಾರೆ. ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಹಾಗೂ ಸ್ಥಳೀಯ ಯುವಕರ ಸೇವಾಕಾರ್ಯ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.