ಕೊಪ್ಪ ತಾಲೂಕಿನಲ್ಲಿ 1799 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಕೊಪ್ಪ ತಾಲೂಕಿನ ಕೊಂಚೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ 1799 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಭಟ್ ಇವರು ವಹಿಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರು ಕುಟುಂಬದ ದಿನ ಕಾರ್ಯಕ್ರಮವನ್ನು ನೆರವೇರಿಸಿ ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ
ಶ್ರೀ ಸುಧಾಕರ್ ಶೆಟ್ಟಿ ತುಂಕಾನೆ, ಶ್ರೀ ಪ್ರಶಾಂತ್ ಚಿತ್ರಗುತ್ತಿ, ಶ್ರೀ ಶ್ರೀನಿವಾಸ್ ಗೌಡ ಕುಂಚೂರು, ನಿರ್ದೇಶಕರಾದ
ಶ್ರೀ ಸದಾನಂದ ಬಂಗೇರ, ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಅರವಿಂದ ಸೋಮಯ್ಯ ಜಿ., ದೇವಪ್ಪ ಸಿಗದಾಲು, ಶ್ರೀಮತಿ ಭಾಗ್ಯ ನಂಜುಂಡಿ ಸ್ವಾಮಿ, ಯೋಜನಾಧಿಕಾರಿಗಳಾದ ಶ್ರೀ ನಾಗರಾಜ್ ಕುಲಾಲ್, ಶಿಬಿರಾಧಿಕಾರಿ ಕುಮಾರ್ ಟಿ., ಆರೋಗ್ಯ ಸಹಾಯಕಿ ಶ್ರೀಮತಿ ಸೌಮ್ಯ ಉಪಸ್ಥಿತರಿದ್ದರು.