ವಿಜಯನಗರ ಜಿಲ್ಲಾ ಜನಜಾಗೃತಿ ವೇದಿಕೆ ಸಭೆ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ವಿಜಯನಗರ ಜಿಲ್ಲಾ ಜನಜಾಗೃತಿ ವೇದಿಕೆ ಸಭೆ ರಾಜ್ಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ, ಕೊಪ್ಪಳ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜೆ. ಚಂದ್ರಶೇಖರ್, ಜಿಲ್ಲಾಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪ ನಾಯಕ್, ಕಾರ್ಯದರ್ಶಿ ಶ್ರೀ ಸತೀಶ್ ಶೆಟ್ಟಿ ರವರ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ 2024-25 ರ ಆರ್ಥಿಕ ವರ್ಷದ ಸಾಧನೆಯ ವಿಮರ್ಶೆ, ಸಮಗ್ರ ಕಾರ್ಯಕ್ರಮದ ಅನುಷ್ಠಾನ, ತಾಲೂಕುವಾರು ವರದಿ ಮಂಡನೆ, ನವಜೀವನ ಪೋಷಕರ ಸಭೆ, ನವಜೀವನ ಸಮಿತಿಯ ಪ್ರಗತಿಯ ಅವಲೋಕನ, ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮತ್ತು ಕೋ ಅಫ್ಟ್ ಸದಸ್ಯರು, ನವಜೀವನೋತ್ಸವ ಕಾರ್ಯಕ್ರಮ, ಜಿಲ್ಲಾ ಜನಜಾಗೃತಿ ವೇದಿಕೆಯ ಲೆಕ್ಕಾಚಾರ ಹಾಗೂ ಆಂತರಿಕ ಲೆಕ್ಕ ಪರಿಶೋಧನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ, ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳ ಕೆ ವೈ ಸಿ ಕಚೇರಿಯಲ್ಲಿ ದಾಖಲೀಕರಣ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಉಪಸ್ಥಿತರಿದ್ದರು.