ಅಂತರಂಗ ಶುದ್ಧಿಯಿಂದ ದುಶ್ಚಟದಿಂದ ಮುಕ್ತರಾಗಲು ಸುಲಭ ಸಾಧ್ಯ- ಡಾ|| ಡಿ. ವೀರೇಂದ್ರ ಹೆಗ್ಗಡೆ ಯವರು

Janajagurthi Vedike News

ಧರ್ಮಸ್ಥಳ: ಮಹೋತ್ಸವ ಸಭಾಭವನದಲ್ಲಿ ನಡೆದ ಸಾಧಕ ನವಜೀವನ ಸದಸ್ಯರ ಸಮ್ಮಿಲನ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ, ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತೀರಿ, ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಜೀವನ ನಡೆಸಿ ಎಂದು ಮಾರ್ಗದರ್ಶನ ನೀಡಿದರು. “ಕತ್ತಲು ಮುಗಿದ ಮೇಲೆ ದೀಪ ಬೆಳಗಲು ಸಾಧ್ಯವಿಲ್ಲ ದೀಪ ಬೆಳಗಿದಾಗ ಮಾತ್ರ ಕತ್ತಲು ದೂರವಾಗುತ್ತದೆ” – ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆ ಯವರು, ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆ ಯವರು ಮಾತನಾಡಿ ಸಾವಿರಾರು ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಜ್ಞಾನದ ದೀಪವನ್ನು ಬೆಳಕುವಂತೆ ಮಾಡಿ ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಮೂಡಿಸುವಲ್ಲಿ ಜನಜಾಗೃತಿ ಕಾರ್ಯಕ್ರಮ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಜೀವನದಲ್ಲಿ ಮದ್ಯಪಾನ ಬಿಟ್ಟು ಹೊಸ ಜೀವನ ಕಟ್ಟಿಕೊಳ್ಳಿ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ಜೀವನ ನಡೆಸಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಅರವಿಂದ ಸೋಮಯಾಜಿ, ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಹೊನ್ನಳ್ಳಿ, ತೀರ್ಥಹಳ್ಳಿ-1, ತೀರ್ಥಹಳ್ಳಿ-2, ಕಡೂರು, ಶಿವಮೊಗ್ಗ, ಕೊಪ್ಪ ತಾಲೂಕುಗಳ 26 ನವಜೀವನ ಸಮಿತಿಗಳ 260 ಸದಸ್ಯರು ಭಾಗವಹಿಸಿದ್ದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್ ರವರು ಪ್ರಾಸ್ತಾವಿಕದೊಂದಿಗೆ ಪೂಜ್ಯರನ್ನು ಮತ್ತು ಅಮ್ಮನವರನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯವರಾದ ಶ್ರೀ ಗಣೇಶ್ ಆಚಾರ್ಯ ರವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಆಡಳಿತಾತ್ಮಕ ಯೋಜನಾಧಿಕಾರಿಯವರಾದ ಶ್ರೀ ಮಾಧವ ಗೌಡ, ಶೌರ್ಯ ವಿಪತ್ತು ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಜೈವಂತ್ ಪಟಗಾರ ಮತ್ತು ಶ್ರೀ ಕಿಶೋರ್ ಕುಮಾರ್, ಶಿಬಿರಾಧಿಕಾರಿಗಳಾದ ಶ್ರೀ ದಿವಾಕರ್ ಪೂಜಾರಿ ಮತ್ತು ಶ್ರೀ ದಿನೇಶ್ ಮರಾಠಿ, ಆಪ್ತ ಸಮಾಲೋಚಕರಾದ ಶ್ರೀ ಮಧು ಮತ್ತು ಆರೋಗ್ಯ ಸಹಾಯಕಿ ಶ್ರೀಮತಿ ಸೌಮ್ಯ ಉಪಸ್ಥಿರಿದರು.