ನೂತನ ಅಧ್ಯಕ್ಷರಾಗಿ ಕೆ ಎಂ ಮುನೇಗೌಡ ರವರು ಆಯ್ಕೆ

Janajagurthi Vedike Uncategorized

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ವಕೀಲರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆದ ಕೆಎಂ ಮುನೇಗೌಡ ಸರ್ ರವರಿಗೆ ಗೌರವಪೂರ್ವಕ ಅಭಿನಂದನೆಗಳು…

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುವ 256ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಪರಮ ಪೂಜ್ಯರು ಭೇಟಿ ನೀಡಿ 65 ಮಂದಿ ಶಿಬಿರಾರ್ಥಿ ಬಂಧುಗಳಿಗೆ ಮಾರ್ಗದರ್ಶನ ನೀಡಿದರು . ಈ ಸಂದರ್ಭದಲ್ಲಿ ಪೂಜ್ಯರ ಆಪ್ತ ಕಾರ್ಯದರ್ಶಿ ಯವರಾದ ವೀರು ಶೆಟ್ಟಿ, ಸುದರ್ಶನ್ ,ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್,ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಜಯಾನಂದ, ಆಪ್ತ ಸಮಾಲೋಚಕ ಮಧು, ಆರೋಗ್ಯ ಸಹಾಯಕಿ ಶ್ರೀಮತಿ ಪ್ರಭ ಮತ್ತು ನವ ಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Janajagurthi Vedike Uncategorized

ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ದ್ವಿತೀಯ ಸಭೆ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಲಬುರಗಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಲಬುರಗಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ 2025-26ನೇ ಸಾಲಿನ ದ್ವಿತೀಯ ಸಭೆಯನ್ನು ಜಿಲ್ಲಾ ಕಚೇರಿ ಸಭವನದಲ್ಲಿ ನಡೆಸಲಾಯಿತು.ಕಲಬುರಗಿ ತಾಲೂಕಿನ ಯೋಜನಾಧಿಕಾರಿಗಳಾದ ರಿಯಾಜ್ ಅತ್ತಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಬಯಸಿದರು.ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಅಧ್ಯಕ್ಷರು ಸಿಎನ್ ಬಾಬಳ್ಗಾವ್ ಹಾಗೂ ಜಿಲ್ಲಾ ಕಾರ್ಯದರ್ಶಿ ಗಣಪತಿ ಮಾಳಂಜಿ ಹಾಗೂ ಎಲ್ಲಾ ತಾಲೂಕಿನ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು …

ಶ್ರೀ ಹೆಚ್. ಎಸ್ ನಾಗೇಶ್ ರವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೆ ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ.

Janajagurthi Vedike Uncategorized

ಶ್ರೀ ಹೆಚ್. ಎಸ್ ನಾಗೇಶ್ ರವರು ರಾಜ್ಯಾಧ್ಯಕ್ಷರು ಕರ್ನಾಟಕ ಛಾಯಾ ಚಿತ್ರ ಗ್ರಾಹಕರ ಸಂಘ (ರಿ) ಬೆಂಗಳೂರು, ಅಧ್ಯಕ್ಷರು ಸಂಸ್ಕೃತಿ ಟ್ರಸ್ಟ್ (ರಿ) ದೊಡ್ಡಬಳ್ಳಾಪುರ, ಮಾಜಿ ಕಾರ್ಯದರ್ಶಿ ದಕ್ಷಿಣ ಭಾರತ ಪೋಟೋ ಮತ್ತು ವಿಡಿಯೋ ಗ್ರಾಫ್ ಅಸೋಷಿಯೇಷನ್ ಚನೖ, ನಿರ್ದೇಶಕರು ಬೀರೇಶ್ವರ ಕೋ ಆಪರೇಟೀವ್ ಸೊಸೖಟಿ ದೊಡ್ಡಬಳ್ಳಾಪುರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದು ಪ್ರಸ್ತುತ ಎರಡು ವರ್ಷಗಳ ಅವಧಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೆ ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ.

ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ.

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಪರಮಪೂಜ್ಯ ಡಾII ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ “ಜಾಗೃತಿಸೌಧ” ದಲ್ಲಿ 256ನೇ ವಿಶೇಷ ಮದ್ಯವರ್ಜನ ಶಿಬಿರ ( 1981ನೇ ರಾಜ್ಯ ಮಟ್ಟದ ಶಿಬಿರ ) ಉದ್ಘಾಟನೆಗೊಂಡಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶಿಬಿರದ ವೈದ್ಯಾಧಿಕಾರಿ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ವೈದ್ಯರಾದ ಡಾl ಶ್ರೀ ಮೋಹನದಾಸ …

ಜಮಖಂಡಿ ತಾಲೂಕಿನ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಭಾಷಣ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೌರವಾನ್ವಿತ ರಾಜ್ಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ ಬಾದಾಮಿ ಸರ್ ರವರಿಂದ.

1974ನೇ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಆದಿಚುಂಚನಗಿರಿ ಮಠದ ಸಭಾಭವನದಲ್ಲಿ ನಡೆದ 1974ನೇ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮೇಲುಕೋಟೆ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಭಟ್ಟರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಆಶೀರ್ವಚನ ಮಾಡಿದರು.

ತುಮಕೂರು-1 ಜಿಲ್ಲಾ ಜನಜಾಗೃತಿ ವೇದಿಕೆ ಪದಾದಿಕಾರಿಗಳ ಸಭೆ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ತುಮಕೂರು-1 ಜಿಲ್ಲೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು-1 ಜಿಲ್ಲೆ ಸಹಯೋಗದೊಂದಿಗೆ ರಾಜರ್ಷಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಷೀರ್ವಾದ ಹಾಗೂ ಮಾರ್ಗ ದರ್ಶನಗಳೊಂದಿಗೆ ತುಮಕೂರು-1 ಜಿಲ್ಲಾ ಜನಜಾಗೃತಿ ವೇದಿಕೆ ಪದಾದಿಕಾರಿಗಳ ಸಭೆಯನ್ನು ತುಮಕೂರು ಯೋಜನಾಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.ತುಮಕೂರು ಗ್ರಾಮಾಂತರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ಸಂದೇಶ್ ರವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸ್ವಾಗತವನ್ನು ಬಯಸಿದರು. ವೇದಿಕೆಯಲ್ಲಿ …

1974ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike Uncategorized

ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಕೆ. ಆರ್. ನಗರ ಜಿಲ್ಲೆಯ ಮೇಲುಕೋಟೆ ಯೋಜನಾ ವ್ಯಾಪ್ತಿಯಲ್ಲಿ 1974ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಸರ್ ರವರಿಂದ 42 ಶಿಬಿರಾರ್ಥಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಮಾಹಿತಿ-ಮಾರ್ಗದರ್ಶನ