ಬೆಳ್ತಂಗಡಿ, ಆಗಸ್ಟ್ 16: ನಡ ಗ್ರಾಮದ ಬೋಜಾರ ಬೈಲಿನಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಅತಿ ಮಳೆಯ ಕಾರಣದಿಂದ ಭಾರೀ ಗಾತ್ರದ ಮರಗಳು ತೇಲಿಕೊಂಡು ಬಂದು ಅಣೆಕಟ್ಟಿನ ಕಿಂಡಿಗಳಿಗೆ ಸಿಲುಕಿಕೊಂಡಿತ್ತು. ಪರಿಣಾಮ ನೀರು ಸೇತುವೆಯ ಪಕ್ಕದ ಸ್ಥಳದಲ್ಲಿ ಹರಿದುಹೋಗಲಾರಂಭಿಸಿತ್ತು. ತುರ್ತಾಗಿ ಮರಮುಟ್ಟಗಳನ್ನು ತೆರವುಗೊಳಿಸದಿದ್ದರೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇತ್ತು. ನದಿಯ ನೀರು ಕಿಂಡಿ ಅಣೆಕಟ್ಟಿನಿಂದ ಹರಿದು ಹೋಗಲು ಸಾಧ್ಯವಿಲ್ಲದೇ ಪಕ್ಕದಲ್ಲೇ ಕಾಲುವೆ ನಿರ್ಮಿಸಿಕೊಂಡು ಹರಿಯಲಾರಂಭಿಸಿತ್ತು. ಇದನ್ನು ಉಪೇಕ್ಷಿಸಿದರೆ ಸುತ್ತಲಿನ ಹದಿನೈದಕ್ಕೂ ಅಧಿಕ ಮನೆಗಳು ಮತ್ತು ನೂರಾರು ಎಕರೆ ಅಡಿಕೆ ಹಾಗೂ ರಬ್ಬರ್ ತೋಟಗಳು ನೆಲಕ್ಕೆ ಉರುಳುವ ಅಪಾಯವಿತ್ತು. …
ಶ್ರೀ ಧರ್ಮಸ್ಥಳ ಸೇವಾ ನೆರಿಯ ವಿಪತ್ತು ನಿರ್ವಹಣೆ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ
ನೆರಿಯ ಗ್ರಾಮದ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು. ಸ್ವಯಂಸೇವಕರಾದ ನವೀನ್ ಹಾಗೂ ಆಟೋ ಚಾಲಕರು ಸೇರಿ ಹನಿಯೂರು ಪೇಟೆಯಲ್ಲಿ ಕಸ ಕಡ್ಡಿಗಳ ಹಾಗೂ ಗಿಡ ಪೊದೆಗಳನ್ನು ತೆಗೆದು ಸ್ವಚ್ಛತಾ ಕಾರ್ಯ ಮಾಡಿರುತ್ತಾರೆ.
ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದಿಂದ ಶಾಲಾ ಮೈದಾನದಲ್ಲಿ ಗಿಡ ನಾಟಿ ಕಾರ್ಯಕ್ರಮ
ಬೆಳ್ತಂಗಡಿ, ಆಗಸ್ಟ್ 19: ಶ್ರೀ ಧರ್ಮಸ್ಥಳ ಸೇವಾ ನಡ ಗ್ರಾಮದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಿಂದ ಹಿರಿಯ ಪ್ರಾಥಮಿಕ ಶಾಲೆ ಮಂಜೊಟ್ಟಿಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಜಿತ್ ಆರಿಗ ಅವರು ದೀಪ ಬೆಳಗಿಸುವ ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೆ ಗಿಡ ವಿತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಬೆಳ್ತಂಗಡಿ ತಾಲೂಕಿನಲ್ಲಿ ಬಹಳ ಉತ್ತಮ ಸೇವಾಕಾರ್ಯವನ್ನು ನಡೆಸುತ್ತಿದೆ. ಕಿಂಡಿ ಅಣೆಕಟ್ಟು ಸ್ವಚ್ಛತೆಯಂತಹ ಕಾರ್ಯ ನಡೆಸಿ …
ಗುರುವಾಯನಕೆರೆ: ನಾಡಿಗೆ ಬಂದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞೆ ಶೋಭಾ..
ಗುರುವಾಯನಕೆರೆ, ಅಗಸ್ಟ್ 26: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಉರಗ ತಜ್ಞೆ ಶ್ರೀಮತಿ ಶೋಭಾ ಅವರು ಮಧ್ಯರಾತ್ರಿಯಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ. ತಣ್ಣೀರುಪಂಥ ವಲಯದ ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಉದ್ದನೆಯ ಹೆಬ್ಬಾವೊಂದು ಕಂಡುಬಂದಿತ್ತು. ಅಪಾಯಕಾರಿಯಂತೆ ಕಂಡುಬರುತ್ತಿರುವ ಹಾವು ಕಣ್ಣಿಗೆ ಗೋಚರವಾದಾಗ ಸಮಯ ಮಧ್ಯರಾತ್ರಿ ರಾತ್ರಿ ಹನ್ನೆರಡು ಗಂಟೆ. ತುರ್ತು ಕೆಲಸದ ನಿಮಿತ್ತ ಆ ರಸ್ತೆಯಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಶ್ರೀ ವಸಂತ್ ಅವರು ರಸ್ತೆಯ ಮೇಲೆ ಹರಿಯುತ್ತಿದ್ದ ಹಾವನ್ನು ಗಮನಿಸಿದ್ದಾರೆ. ಅದನ್ನು …
ಧಾರವಾಡ: ವಿಪತ್ತು ನಿರ್ವಹಣಾ ಸ್ವಯಂಸೇವಕರಿಂದ ಸ್ವಚ್ಚತಾ ಕಾರ್ಯಕ್ರಮ
ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಓಣಿಯ ಸ್ವಚ್ಚತಾ ಸೇವಾಕಾರ್ಯ ನಡೆಸಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ವಿಪತ್ತು ನಿರ್ವಹಣೆ ಸಂಯೋಜಕಿ ಪೂಜಾ ಪಾಟೀಲ್ ಅವರ ನೇತ್ರತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆದಿದ್ದು ಸ್ವಯಂಸೇವಕರಾದ ನೇತ್ರಾವತಿ, ನಾಗರಾಜ್, ಸುಭಾಷ್, ಪೂಜಾ, ಪ್ರೀತಿ, ರೇಣುಕಾ, ಸಾಹಿಲ್ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ಗಿಡಗಳನ್ನು ವಿತರಣೆ ಮಾಡಲಾಯಿತುಇವರು ನಡೆದಿದೆ ಸೇವಾಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಪತ್ತು ನಿರ್ವಹಣಾ ಸ್ವಯಂಸೇವಕರ ಗುರುಲಿಂಗ ಇವರಿಂದ ಉರಗ ಕಾರ್ಯಾಚರಣೆ
ಅಥಣಿ, ಅಗಸ್ಟ್ 26: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ ಅಥಣಿಯ ಉರಗ ತಜ್ಞ ಶ್ರೀ ಗುರುಲಿಂಗ ಶಂಕೆ ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ. ಶಿರುಗುಪ್ಪಿ ಗ್ರಾಮದ ಶ್ರೀಕಾಂತ್ ಸಳ್ಳಕೋಡ ಅವರ ತೋಟದ ಮನೆಯ ಹತ್ತಿರ ಹಾವೊಂದು ಕಂಡುಬಂದಿತ್ತು. ಅಪಾಯಕಾರಿಯಂತೆ ಕಂಡುಬರುತ್ತಿರುವ ಈ ಹಾವು ಕಣ್ಣಿಗೆ ಗೋಚರವಾಗುತ್ತಿದ್ದಂತೆ ಶ್ರೀಕಾಂತ್ ಅವರು ಶ್ರೀ ಧರ್ಮಸ್ಥಳ ಸೇವಾ ಘಟಕದ ಸ್ವಯಂಸೇವಕ ಗುರುಲಿಂಗ ಶಂಕೆ ಅವರಿಗೆ ದೂರವಾಣಿ ಕರೆ ಮಾಡಿದ್ದರು. ತಕ್ಷಣ ಸ್ಪಂದಿಸಿದ ಇವರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಹತ್ತಿರದ …
ಗ್ರಾಮದಲ್ಲಿ ಭೀತಿ ಮೂಡಿಸಿದ್ದ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಶ್ರೀ ಧರ್ಮಸ್ಥಳ ಸೇವಾ ಕಿಲ್ಲೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು
ಬೆಳ್ತಂಗಡಿ, ಆಗಸ್ಟ್ 19: ಕಿಲ್ಲೂರು ಗ್ರಾಮದ ಜನರಿಗೆ ಬಹಳ ದಿನಗಳಿಂದ ಆಗಾಗ ಕಾಣಿಸಿಕೊಂಡು ತೊಂದರೆ ಕೊಡುತ್ತಿದ್ದ ಹಾವೊಂದನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ ‘ಶ್ರೀ ಧರ್ಮಸ್ಥಳ ಸೇವಾ’ ಕಿಲ್ಲೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು. ಅನೆಕಂದೊಡಿ ಎಂಬ ಹಾವು ಆಗಾಗ್ಗೆ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಮಕ್ಕಳು, ಮನೆಮಂದಿಯೆಲ್ಲಾ ಭಯದಿಂದ ನಾಲ್ಕಾರು ದಿನಗಳನ್ನು ಕಳೆದಿದ್ದರು. ಸಮಸ್ಯೆಯನ್ನು ಅರಿತ ಶ್ರೀ ಧರ್ಮಸ್ಥಳ ಸೇವಾ ನಿರ್ವಹಣಾ ಘಟಕದ ಸ್ವಯಂಸೇವಕರಾದ ಶ್ರೀ ರತನ್ ಶೆಟ್ಟಿ ಹಾಗೂ ಶ್ರೀ ವಿನಯಚಂದ್ರ ಅವರು ಸ್ಥಳೀಯರಾದ ಶ್ರೀ ಕೃಷ್ಣಪ್ಪ ಪೂಜಾರಿ, ಉಮೇಶ್ ಪೂಜಾರಿ ಹಾಗೂ …
Staff Training
📚*NITTEಎಜುಕೇಶನ್ ಇಂಟರ್ನ್ಯಾಷನಲ್ ಮಂಗಳೂರುನಲ್ಲಿ ,ನಡೆದ ಜನಜಾಗೃತಿ ವೇದಿಕೆ ಸಿಬ್ಬಂದಿವರ್ಗದ ತರಬೇತಿ ಕಾರ್ಯಗಾರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. LH ಮಂಜುನಾಥ್ ಸರ್ ರವರು









