ಶ್ರೀ ಧರ್ಮಸ್ಥಳ ಸೇವಾ ತಣ್ಣೀರುಪಂಥ ಘಟಕದ ಸ್ವಯಂಸೇವಕರಿಂದ ಐದು ಕಿಲೋಮೀಟರ್ ರಸ್ತೆಯ ಇಕ್ಕೆಲಗಳ ಸ್ವಚ್ಛತೆ
ಗುರುವಾಯನಕೆರೆ, ಆಗಸ್ಟ್ 18: ಶ್ರೀ ಧರ್ಮಸ್ಥಳ ಸೇವಾ ತಣ್ಣೀರುಪಂಥ ಘಟಕದ ಸ್ವಯಂಸೇವಕಿಯಾದ ಶ್ರೀಮತಿ ಶೋಭಾ ಕುಪ್ಪೆಟ್ಟಿ ಅವರು ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರಿಗೆ ಪ್ರೇರಣೆ ನೀಡಿ, ಅವರ ನೆರವಿನಿಂದ ಐದು ಕಿಲೋಮೀಟರ್ ಉದ್ದುಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕುಪ್ಪೆಟ್ಟಿಯಿಂದ ನೆಕ್ಕಿಲು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಪ್ರಮಾಣದಲ್ಲಿ ಹುಲ್ಲು, ಅನಾವಶ್ಯಕ ಗಿಡಗಳು, ಪೊದೆಗಳು ಬೆಳೆದಿದ್ದವು. ದಾರಿಹೋಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದ್ದ ಇದನ್ನು ಗಮನಿಸಿದ ಸ್ವಯಂಸೇವಕಿ ಶೋಭಾ ಅವರು ಅವುಗಳನ್ನು ತೆರವುಗೊಳಿಸಲು ನಿರ್ಧರಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರು ಭಾಗಿಯಾಗುವಂತೆ …
ಸಕಲೇಶಪುರದಲ್ಲಿ ಕುಸಿದು ಬಿದ್ದ ಮನೆಗೆ ತೆರಳಿ ತಾತ್ಕಲಿಕ ಸೂರು ಒದಗಿಸಿಕೊಟ್ಟ ವಿಪತ್ತು ನಿರ್ವಹಣೆ ನೆರಿಯ ಘಟಕದ ಸ್ವಯಂಸೇವಕರು
ಬೆಳ್ತಂಗಡಿ, ಆಗಸ್ಟ್ 16: ನೆರಿಯ ಗ್ರಾಮದ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರಾದ ಶ್ರೀ ನವೀನ್ ಅವರು ಸಕಲೇಶಪುರ ತಾಲೂಕಿನ ತನ್ನ ಸ್ನೇಹಿತ ಲತೇಶ್ ಅವರ ಮನೆ ವಿಪರೀತ ಗಾಳಿ,ಮಳೆಯ ಕಾರಣದಿಂದ ಕುಸಿದು ಬಿದ್ದಿರುವ ವಿಷಯವನ್ನು ತಿಳಿದು ಕೂಡಲೇ ನೆರಿಯ ಗ್ರಾಮದಲ್ಲಿರುವ ತನ್ನ ಸ್ನೇಹಿತರೊಂದಿಗೆ ಧಾವಿಸಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ದಿನಾಂಕ 16ರ ರಾತ್ರಿ ಮನೆ ಕುಸಿದ ಬಗ್ಗೆ ಸ್ನೇಹಿತನಿಂಧ ವಿಷಯ ತಿಳಿದಿದೆ. ಕೂಡಲೇ ಸ್ಪಂದಿಸದಿದ್ದರೆ ವಿಪರೀತ ಮಳೆ ಸುರಿಯುತ್ತಿರುವ ಅಲ್ಲಿ ಆ ಕುಟುಂಬಕ್ಕೆ ಬಹಳ ತೊಂದರೆ ಕಟ್ಟಿಟ್ಟ ಬುತ್ತಿ ಎಂದುಕೊಂಡ …








