ಬೈಲಹೊಂಗಲ ತಾಲೂಕಿನಲ್ಲಿ 1886 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಬೈಲಹೊಂಗಲ ತಾಲೂಕಿನಲ್ಲಿ ನಡೆದ 1886 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಮಹಾಂತೇಶ ಕೌಜಲಗಿಯವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ನಂತರ ಉದ್ಘಾಟನಾ ನುಡಿಗಳನ್ನಾಡಿದ ಸನ್ಮಾನ್ಯ ಶಾಸಕರು ಪೂಜ್ಯರು ಮಾಡುವ ಎಲ್ಲ ಕಾರ್ಯಗಳು ಸಮಾಜಮುಖಿಯಾಗಿದ್ದು, ಅದರಲ್ಲಿಯೂ ಮದ್ಯವರ್ಜನ ಶಿಬಿರ ಎನ್ನುವುದು ಒಡೆದ ಕುಟುಂಬಗಳನ್ನು ಜೋಡಿಸಿ ಮನೆ ಮನ ಬೆಳೆಗಿಸುವ ಪುಣ್ಯದ ಕಾರ್ಯಕ್ರಮ ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ನನ್ನ ಭಾಗ್ಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಿಠ್ಠಲ್ ಪೀಸೆ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾನಂದ ಏಣಗಿ, ಶ್ರೀ ಮಡಿವಾಳೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ಕಲಬಾವಿ, ಕೆಂಗಾನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಬಸವರಾಜ ಹುಲಗನ್ನವರ್, ಶಿಬಿರದ ವೈದ್ಯಾಧಿಕಾರಿಗಳಾದ ಶ್ರೀ ಕಿರಣ್ ಮೂಡಲಗಿ, ಜನಜಾಗೃತಿ ಯೋಜನಾಧಿಕಾರಿ ಶ್ರೀಯುತ ಭಾಸ್ಕರ್ ಏನ್., ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ವಿಜಯ ಕುಮಾರ, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಶಿಬಿರಾಧಿಕಾರಿ ಶ್ರೀ ದಿನೇಶ್ ಮರಾಠಿ, ಆರೋಗ್ಯ ಸಹಾಯಕರಾದ ಶ್ರೀ ವೆಂಕಟೇಶ, ಮೇಲ್ವಿಚಾರಕ ಉಮೇಶ್, ತಾಲೂಕಿನ ಎಲ್ಲ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ನವಜೀವನ ಸದಸ್ಯರು ಉಪಸ್ಥಿತರಿದ್ದರು.