ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ತುಮಕೂರು 1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಸಭೆ

Janajagurthi Vedike Announcements

ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ತುಮಕೂರು 1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯನ್ನು ಜಿಲ್ಲಾಧ್ಯಕ್ಷರಾದ ಶ್ರೀ ಅಮರನಾಥ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ಸಭೆಯಲ್ಲಿ ಮಧ್ಯವರ್ಜನ ಶಿಬಿರದ ಅನುಷ್ಠಾನ , ನವ ಜೀವನ ಸಮಿತಿ ಬಲವರ್ಧನೆ, ವಾರ್ಷಿಕೋತ್ಸವ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಇನ್ನಿತರ ಕಾರ್ಯಕ್ರಮಗಳ ಕುರಿತು ವಿವರವಾದ ಚರ್ಚೆ ನಡೆಸಲಾಯಿತು ಮತ್ತು ಬಾಕಿ ಉಳಿದ ಕಾರ್ಯಕ್ರಮಗಳನ್ನು ಮುಂದಿನ ದಿನದಲ್ಲಿ ಯಶಸ್ವಿಯಾಗಿ ಮುಗಿಸುವಂತೆ ನಿರ್ಣಯಿಸಲಾಯಿತು. ಗತ ಸಭೆಯ ವರದಿಯ ಬಳಿಕ ಪ್ರತಿ ಯೋಜನೆ ವ್ಯಾಪ್ತಿಯಲ್ಲಿ ನಡೆಸಲಾದ ಕಾರ್ಯಕ್ರಮಗಳ ವರದಿಯನ್ನು ಪಡೆಯಲಾಯಿತು ಮತ್ತು ಈ ಸಂದರ್ಭದಲ್ಲಿ ಪದಾಧಿಕಾರಿಗಳ ಸಲಹೆಯನ್ನು ಪಡೆಯಲಾಯಿತು ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅಂಗೀಕಾರ ಮಾಡಲಾಯಿತು.