ಹಾವೇರಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಜಿಲ್ಲಾ ಅಧ್ಯಕ್ಷರಾದ ಕಲ್ಯಾಣ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ವರದಿ ವರ್ಷದಲ್ಲಿ ಅನುಷ್ಠಾನಗೊಂಡ ಕಾರ್ಯಕ್ರಮಗಳ ವಿಚಾರಗಳನ್ನು ಮನಗಂಡ ಅವರು ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಜನಜಾಗೃತಿ ಸದಸ್ಯರಾದ ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು. ನಡೆಸಿದ ಶಿಬಿರಗಳು, ತಂಬಾಕು ವಿರೋಧಿ & ಮಾದಕ ವಸ್ತು ವಿರೋಧಿ ದಿನಾಚರಣೆ, ನವಜೀವನ ಸಮಿತಿಗಳ ಸಭೆ, ಸ್ವಾಸ್ಥ್ಯ ಸಂಕಲ್ಪ, ಗಾಂಧಿ ಜಯಂತಿ ಆಚರಣೆ, ಸಾಮಾಜಿಕ ಅರಣ್ಯೀಕರಣ ದಡಿಯಲ್ಲಿ ಗಿಡ ನಾಟಿ, ಪೋಷಕರ ತರಬೇತಿ ಮೊದಲಾದ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾ ವೇದಿಕೆಯ ಗೌರವಾನ್ವಿತ ಸದಸ್ಯರು, ಜಿಲ್ಲೆಯ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
