1619ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಸಮಾರೋಪ ಸಮಾರಂಭ ಕಾರ್ಯಕ್ರಮ / ಹಲಗಾ, ಬೆಳಗಾವಿ

Janajagurthi Vedike News

ಬೆಳಗಾವಿ ಜಿಲ್ಲೆಯ ಖಾಸ್ಬಾಗ ಯೋಜನಾ ಕಚೇರಿ ವ್ಯಾಪ್ತಿಯ ಹಲಗದಲ್ಲಿ 1619ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ಇಂದು ನಡೆಸಲಾಯಿತು. ಸಮರೂಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಬಾಲಾಚಾರ್ಯ 108 ಸಿದ್ದಸೇನಾ ಮುನಿ ಮಹಾರಾಜರು ಹಾಗೂ ಧರ್ಮಶ್ರೀ ತಪೋ ರತ್ನ ಷ. ಬ್ರ. ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮುಕ್ತಿ ಮಠ ಬೆಳಗಾವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮಂಗಳ ಸುರೇಶ್ ಅಂಗಡಿ ಸಂಸದರು ಬೆಳಗಾವಿ, ಶ್ರೀ ಮಲ್ಲಿಕಾರ್ಜುನ ತುಬಾಕಿ, ಶ್ರೀ ರಾಜಣ್ಣ ಕೊರವಿ, ಶ್ರೀ ದುಗ್ಗೆಗೌಡ, ಶ್ರೀ ಜಗದೀಶ್ ಹಾರೋಗೊಪ್ಪ,ಶ್ರೀ ಪ್ರದೀಪ್ ಜಿ ಶೆಟ್ಟಿ, ಶ್ರೀ ಚಾರು ಕೀರ್ತಿ ಸೈಬಣ್ಣನವರ್, ಶ್ರೀ ಮಹಾವೀರ್ ಬಸ್ತವಾಡ್, ಶ್ರೀ ಪ್ರಕಾಶ್ ಪಾಟೀಲ್ ಗಣ್ಯರು ಉಪಸ್ಥಿತರಿದ್ದರು. ಈ ಶಿಬಿರದಿಂದ 62 ಮಂದಿ ವ್ಯಸನ ಮುಕ್ತರಾಗಿ ಬಾಳಲು ಸಂಕಲ್ಪ ತೊಟ್ಟರು. ಈ ಮಧ್ಯವರ್ಜನ ಶಿಬಿರವು ಹಲಗ ಗ್ರಾಮದ ಸಮಸ್ತ ಪಾನಮುಕ್ತ ಸದಸ್ಯರಿಂದ ಬಹಳ ಅದ್ಭುತವಾಗಿ ನಡೆದಿರುತ್ತದೆ.