ಹಾರೋಹಳ್ಳಿ ಯೋಜನೆ ವ್ಯಾಪ್ತಿಯ ಮರಳವಾಡಿಯಲ್ಲಿ 1620ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ

Janajagurthi Vedike News

ಹಾರೋಹಳ್ಳಿ ಯೋಜನೆ ವ್ಯಾಪ್ತಿಯ ಮರಳವಾಡಿಯಲ್ಲಿ 1620ನೇ ಮಧ್ಯವರ್ಜನ ಶಿಬಿರ ಉದ್ಘಾಟನೆಗೊಂಡಿದ್ದು ಉದ್ಘಾಟನೆಯನ್ನು ಶ್ರೀಮೃತ್ಯುಂಜಯ ಮಹಾಸ್ವಾಮಿಗಳು ಮತ್ತು ರಾಮನಗರ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಚಿಕ್ಕಣ್ಣಯ್ಯ ರವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನೆ ಸಮಿತಿ ಅಧ್ಯಕ್ಷರಾದ ಎಂಬಿ ಕೃಷ್ಣರವರು ವಹಿಸಿಕೊಂಡು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರಾಮನಗರ ಜಿಲ್ಲಾ ನಿರ್ದೇಶಕರಾದ ಜಯಕರ್ ಶೆಟ್ಟಿ ಅವರು ಯೋಜನೆ ಬೆಳೆದು ಬಂದ ದಾರಿ ಮತ್ತು ಶಿಬಿರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಮರಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ವೀಣಾ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ಚಂದ್ರಕಲಾ, ಶ್ರೀ ಕೃಷ್ಣ, ರಾಜಶೇಖರ್, ಸಮಿತಿಯ ಪದಾಧಿಕಾರಿಗಳು, ಯೋಜನಾಧಿಕಾರಿ ಭಾಸ್ಕರ್, ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ನಾಗವೇಣಿಯವರು ಶಿಬಿರಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಸಂಘಟಿಸಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ , ಮೇಲ್ವಿಚಾರಕ ಮಧು ಅವರು ನಿರೂಪಿಸಿದರು. ಈ ಸಂದರ್ಭ ಶಿಬಿರ ಅಧಿಕಾರಿಯಾದ ವಿದ್ಯಾದರ್, ಆರೋಗ್ಯ ಸಹಾಯಕಿ ಕುಮಾರಿ ರಂಜಿತ, ಜನಜಾಗೃತಿ ಮೇಲ್ವಿಚಾರಕ ಕಿರಣ್ ಉಪಸ್ಥಿತರಿದ್ದರು.