ಗಾಂಧಿ ಸ್ಮರಣೆ ವ್ಯಸನ ಮುಕ್ತರಿಗೆ ಅಭಿನಂದನೆ & ಸನ್ಮಾನ ಕಾರ್ಯಕ್ರಮ

Janajagurthi Vedike

ಪಾನಮುಕ್ತ ಸದಸ್ಯರು ಸಮಾಜದಲ್ಲಿ ಜೀವನ ನಡೆಸುವಾಗ ಸಂಸ್ಕಾರ ಸಂಸ್ಕೃತಿ ರೂಪಿಸಿಕೊಳ್ಳಬೇಕು ಶ್ರೀ ಕೆ. ನೇಮಿರಾಜನಾಯ್ಕ
ಕೊಪ್ಪಳ ಪ್ರಾದೇಶಿಕ ವಿಭಾಗದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ *ಶ್ರೀಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪ ರಾಮನಗರ ಹಗರಿಬೊಮ್ಮನಹಳ್ಳಿ* ಸಭಾಭವನದಲ್ಲಿ ಗಾಂಧಿ ಸ್ಮರಣೆ ವ್ಯಸನ ಮುಕ್ತರಿಗೆ ಅಭಿನಂದನೆ & ಸನ್ಮಾನ ಕಾರ್ಯಕ್ರಮವನ್ನು *ಶ್ರೀ ಷ. ಬ್ರ. ಶಿವಲಿಂಗರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ನವಲಿ ಕಟ್ಟಿಮನಿ ಹಿರೇಮಠ, ಹಂಪಸಾಗರ* ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಡೆಸಲಾಯಿತು.ಹಗರಿಬೊಮ್ಮನಹಳ್ಳಿ ನಗರದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ, ಅಧ್ಯಕ್ಷರಾದ ಶ್ರೀ ಶಿವಪ್ಪ ನಾಯಕ್ ಕಾವಲಿ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಹಾಗೂ ಗಣ್ಯರು ಜಾಥಾ ಕಾರ್ಯಕ್ರಮದ ಮಾಡುವುದರ ಮೂಲಕ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಗಾಂಧಿ ಸ್ಮೃತಿ ಸಭಾ ಕಾರ್ಯಕ್ರಮವನ್ನು ಶ್ರೀ ಕನ್ನಿಕಾ ಪರಮೇಶ್ವರಿ ಸಭಾಭವನದಲ್ಲಿ ಏರ್ಪಡಿಸಿದ್ದು ಈ ಒಂದು ಸಂದರ್ಭದಲ್ಲಿ *ಗೌರವಾನ್ವಿತ ಮಾನ್ಯ ಶಾಸಕರಾದ ಶ್ರೀ. ಕೆ. ನೇಮಿರಾಜ ನಾಯ್ಕ್* ಧರ್ಮಸ್ಥಳದ ಎಲ್ಲಾ ಕಾರ್ಯಕ್ರಮಗಳು ಪೂಜ್ಯರು ಕೈಗೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಸಂಗತಿಯಾಗಿದೆ. ಪಾನಮುಕ್ತ ಸದಸ್ಯರು ಸಾಧಕರಾಗಿ ಮನೆಬೆಳಗಬೇಕು, ಸಮಾಜದಲ್ಲಿ ಜೀವನ ನೆಡೆಸುವಾಗ ಸಂಸ್ಕಾರ – ಸಂಸ್ಕೃತಿ ರೂಪಿಸಿಕೊಳ್ಳಿ ಎಂದು ಪ್ರಾರ್ಥಿಸುವೆ ಎಂದು ತಿಳಿಸಿದರು.ವಿಜಯನಗರ ಜಿಲ್ಲೆಯ ಪಾನ ಮುಕ್ತ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಾಗೂ ಜನಮಂಗಳ ಕಾರ್ಯಕ್ರಮ, ಸುಜ್ಞಾನ ನಿಧಿ ಶಿಷ್ಯವೇತನ ಸ್ಕ್ಯಾಲರ್ಷಿಪ್ ಶೀಪ್ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಸರ್ ರವರು ಆಶಯ ಭಾಷಣದ ಮೂಲಕ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸನ್ನ ನನಸು ಮಾಡುವನಿಟ್ಟಿನಲ್ಲಿ ಈ ದೇಶದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಎಂದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಎಂದು ತಿಳಿಸಿದರು ಸಭಿಕರಿಗೆ ನೀಡಿದರು. ಸದ್ರಿ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಪಾನಮುಕ್ತ ಸದಸ್ಯರು ಹಾಗೂ 2100ಕ್ಕೂ ಮಿಕ್ಕಿದ ಫಲಾನುಭವಿಗಳು ಸದ್ರಿ ಸಭೆಯಲ್ಲಿ ಪಾಲ್ಗೊಂಡಿದ್ದರು.