ಬಾಳೆಹೊನ್ನೂರು ಮದ್ಯವರ್ಜನ ಶಿಬಿರದ ಮಾಸಿಕ ಸಭೆ

Janajagurthi Vedike

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಶೃಂಗೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಚಿಕ್ಕಮಗಳೂರು, 2105ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬಾಳೆಹೊನ್ನೂರು, ಸ್ಥಳೀಯ ಇಲಾಖೆ ಹಾಗೂ ಇಲಾಖೇತರ ಸಂಘ ಸಂಸ್ಥೆಗಳು ಹಾಗೂ ದಾನಿಗಳ ಸಂಯುಕ್ತ ಆಶ್ರಯದಲ್ಲಿ ಬಾಳೆಹೊನ್ನೂರಿನ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ 2105ನೇ ಮದ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆ ನಗರದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ನಡೆಯಿತು.2105ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಕೆ ಮಧುಸೂದನ್ ಭಂಡಾರಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಹೊಸ ಜೀವನವನ್ನು ರೂಪಿಸಿಕೊಂಡಿರುವ 56 ಮಂದಿ ತಾವುಗಳೆಲ್ಲರೂ ಪುಣ್ಯವಂತರು. ತಮ್ಮ ಸುಧೀರ್ಘವಾದ ಬದುಕು ಸುಂದರಮಯವಾಗಿರಲಿ ಎಂದು ಆಶಿಸಿದರು.ನಾಗರಾಜ್ ಕುಲಾಲ್, ಯೋಜನಾಧಿಕಾರಿ, ಜನಜಾಗೃತಿ ವಿಭಾಗ, ಪ್ರಾದೇಶಿಕ ಕಛೇರಿ ಚಿತ್ರದುರ್ಗ ಇವರು ಮಾತನಾಡಿ ಪಾನಮುಕ್ತ ಬದುಕಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಸವಾಲಿನ ಹೆಜ್ಜೆಗಳೆ. ಬುದ್ದಿವಂತಿಕೆಯಿಂದ ತಮ್ಮ ಜೀವನವನ್ನು ಪಾರುಮಾಡಬೇಕು. ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸ್ವಾಭಾವಿಕ. ಅವೆಲ್ಲವನ್ನು ಅರಿತು ಕುಟುಂಬದವರೊಂದಿಗೆ ಬಾಳ್ವೆ ನಡೆಸಿದಾಗ ತಮ್ಮೆಲ್ಲರ ಜೀವನ ಪಾವನಗೊಳ್ಳುವುದು ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಸುಂದರೇಶ್ ಉಪಾಧ್ಯಕ್ಷರು 2105ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ರಾಜೇಶ್ ಉಪಾಧ್ಯಕ್ಷರು 2105ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಕಾರ್ತಿಕ್ ಕಾರ್ಗದ್ದೆ ಕೋಶಾಧಿಕಾರಿ 2105ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಸುರೇಶ್ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಶೃಂಗೇರಿ, ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಅನಿತ ಮೇಲ್ವಿಚಾರಕಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬಾಳೆಹೊನ್ನೂರು ವಲಯ, ಸವಿತಾ ಯೋಗ ಶಿಕ್ಷಕರು, ಮುರಳೀಧರ ಅಧ್ಯಕ್ಷರು ನವಜೀವನ ಸಮಿತಿ ಶೃಂಗೇರಿ ತಾಲೂಕು, ಪ್ರದೀಪ್ ಮಾಜಿ ಕ್ಯಾಪ್ಟನ್ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶೃಂಗೇರಿ ತಾಲೂಕು ಇವರುಗಳು ಉಪಸ್ಥಿತರಿದ್ದು ಶುಭವನ್ನು ಹಾರೖಸಿದರು.ನವಜೀವನ ಸಮಿತಿ ಸದಸ್ಯರು ಹಾಗೂ ಕುಟುಂಬದವರು ತಮ್ಮ ಒಂದು ತಿಂಗಳ ಪಾನಮುಕ್ತ ಜೀವನದ ಅನುಭವಗಳನ್ನು ಹಂಚಿಕೊಂಡರು*
ನೂತನ ನವಜೀವನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಸಭೆಯಲ್ಲಿ ನವಜೀವನ ಪೋಷಕರು, ಹಿರಿಯ ನವಜೀವನ ಸಮಿತಿ ಸದಸ್ಯರು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ನೂತನ ನವಜೀವನ ಸಮಿತಿ ಸದಸ್ಯರು ಮತ್ತು ಇವರ ಕುಟುಂಬದವರು ಭಾಗಿಯಾಗಿದ್ದರು.ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಗೌರಮ್ಮ ಪ್ರಾರ್ಥಿಸಿ, ಸೇವಾಪ್ರತಿನಿಧಿ ಸಾವಿತ್ರಿ ಸ್ವಾಗತಿಸಿ, ಮೇಲ್ವಿಚಾರಕಿ ಅನಿತ ನಿರೂಪಿಸಿ, ವಂದಿಸಿದರು.