ಅಥಣಿ ತಾಲೂಕು ಅಥಣಿ ವಲಯದಲ್ಲಿ ನವ ಜೀವನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.ಕತ್ತಲೆ ತುಂಬಿದ ಬದುಕಿಗೆ ಬೆಳಕು ತಂದ ಮದ್ಯವರ್ಜನ ಶಿಭಿರ ಮನುಷ್ಯನ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಗಾಗಿ ದುಷ್ಟಚಟಗಳಿಂದ ಮುಕ್ತಿ ಸಿಕ್ಕಾಗಮಾತ್ರ ಕತ್ತಲೆ ತುಂಬಿದ ಬದುಕಿಗೆ ಇಂತಹ ಮದ್ಯವರ್ಜನ ಶಿಭಿರ ಸ್ವಾರ್ಥಕವಾಗುತ್ತದೆ.ನವಜೀವನ ಸದಸ್ಯರ ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ತಂದೆ ತಾಯಿ ಬಂಧು ಬಳಗದ ಪುಣ್ಯದ ಫಲದಿಂದ ನವ ಜೀವನ ದೊರಕಿದೆ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ತಮ್ಮದು, ಮನುಷ್ಯನ ಸಮಸ್ಯೆಗಳ ಪರಿಹಾರಕ್ಕೆ,ಯಾವುದೆ ಕಾರಣಕ್ಕೂ ಕುಡಿತದ ಚಟ ಪರಿಹಾರವಲ್ಲ ಎಂದು ಮಾನ್ಯ ಪ್ರಾದೇಶಿಕ ನಿರ್ದೇಶಕರು*ದಯಾಶೀಲ ಮೇಡಂ ಮಾತನಾಡಿದರ ಬೆಲೆನೇ ಕಟ್ಟಲು ಆಗದ ಜೀವನ ಬದುಕಿನ ಅತ್ಯಂತ ದೊಡ್ಡ ಸಂಪಾದನೆ, ಇದರೊಂದಿಗೆ ಬದುಕು ನಿರ್ವಹಣೆಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕು, ಅದು ತನ್ನಿಂದ ಸಾಧ್ಯವಿದೆ, ಹೆಂಡತಿ ಮಕ್ಕಳೂಂದಿಗೆ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ ಎಂದು ಕಿವಿಮಾತು ಸಮಾಜದ ಏಳಿಗೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಗಲಿರುಳು ಶ್ರಮಿಸುತ್ತಿದೆ ಎಂದು ಮಾನ್ಯ ಜಿಲ್ಲಾ ನಿರ್ದೇಶಕರು ಲೀಲಾವತಿ ಮೇಡಂ ಮಾತನಾಡಿದರು.ಮಧ್ಯವರ್ಜನ ಶಿಬಿರದಂತ ನೂರಾರು ಕಾರ್ಯಕ್ರಮಗಳನ್ನು ಈ ನಾಡಿನ ಜನತೆಗೆ ಪೂಜ್ಯರು ನೀಡಿದ್ದಾರೆ ಅವುಗಳನ್ನು ಸದ್ಬಳಿಕೆ ಮಾಡಿ ಬದುಕು ಕಟ್ಟಿಕೊಳ್ಳಿಎಂದು ಜಿಲ್ಲಾ ಜನಜಾಗೃತಿ ಸ್ಥಾಪಕ ಅಧ್ಯಕ್ಷ ಸಂಜಯ ನಾಡಗೌಡರ ಸರ್ ತಿಳಿಸಿದರು 2086ನೇ ಮಧ್ಯವರ್ಜನ ಶಿಬಿರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದಿದ್ದು ನಿಮ್ಮೆಲ್ಲರ ಪುಣ್ಯ. ಇದೇ ಪುಣ್ಯ ಸ್ಥಳದಲ್ಲಿ ತಾವೆಲ್ಲರೂ ದುಶ್ಚಟಕ್ಕೆ ತಿಲಾಂಜಲಿ ಹಾಡಿ ನವ ಜೀವನಕ್ಕೆ ಕಾಲಿಟ್ಟಿದ್ದೀರಿ.ಇನ್ನು ಮುಂದೆ ತಮ್ಮ ಕುಟುಂಬದ ನೆಮ್ಮದಿಯ ಜೀವನದ ಜೊತೆಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ತಮ್ಮ ಕುಟುಂಬದಲ್ಲಿ ಅಭಿವೃದ್ಧಿ ಸಾಧಿಸಿ.ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಬೇರೆಯವರಿಗೆ ಉಪಕಾರ ಮಾಡಲು ಆಗದಿದ್ದರೂ ಉಪದ್ರಮಾಡುವ ಕೆಲಸ ನಿಮ್ಮಿಂದಾಗದಿರಲಿ ಎಂದು ಶುಭಹಾರೈಸಿದರು. ಅಥಣಿ ಜಿಲ್ಲಾ ಜನಜಾಗೃತಿ ಅಧ್ಯಕ್ಷರು ಅಮರ ದುರ್ಗಣ್ಣವರ ಈ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಹೂಸ ಬದುಕು ಕಟ್ಟಿಕೊಂಡಿದ್ದಾರೆ. ಒಳ್ಳೆಯಸಂಸ್ಕಾರದಿಂದ ಸಮಾಜದ ಪ್ರಗತಿ ಸಾಧ್ಯ ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು 2086 ನೆಯ ಮದ್ಯವರ್ಜನ ಶಿಬಿರದ ಅಧ್ಯಕ್ಷ ವಿಜಯ ಬುರ್ಲಿ ಸರ್ ತಿಳಿಸಿದರು.ಈ ಸಂದರ್ಭದಲ್ಲಿ ನವಜೀವನ ಸಮೀತಿ ಸದಸ್ಯ ವಿಠ್ಠಲ ಕೊಬ್ರಿ ಮಾತನಾಡಿ ನಮ್ಮ ಜೀವನದಲ್ಲಿ ಕುಡಿತದ ಚಟದಿಂದ ಮುಕ್ತರಾಗಿದ್ಧು* *ಎಂದಿಗೂ ಮರೆಯಲಾಗದ ಕ್ಷಣ ಈಗ ಸಮಾಜದಲ್ಲಿ ಗೌರವ ಸಿಗುತ್ತಿದೆ ಬಂಧು ಬಳಗ ಶಾಂತಿ ನೆಮ್ಮದಿ* *ಬದುಕು ಕಟ್ಟಿಕೊಂದ್ದಿದ್ದೇವೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ ಸರ್ ತಾಲೂಕು ಯೋಜನಾಧಿಕಾರಿ ಜಗದೀಶ ಹುಲ್ಲತ್ತಿ ಸರ್ ಡಾ. ಶ್ರೀವತ್ಸ ಕುಲಕರ್ಣಿ. ಅಣ್ಣಾಸಾಬ ಚೌಗಲಾ. ರಾಜೇಂದ್ರ ಐಹೊಳೆ.ವಲಯದ ಮೇಲ್ವಿಚಾರಕಿ ಅಂಜನಾ ಖಾನಟ್ಟಿ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರುಸಭೆಯ ಪೂರ್ವದಲ್ಲಿ ಎಲ್ಲಾ ಜೀವನ ಸಮಿತಿ ಸದಸ್ಯರು & ಅಧಿಕಾರಿ ವರ್ಗದವರು ಕುಣಿತ ಭಜನೆಯ ಮೂಲಕ ಪೂಜಾ ಕಾರ್ಯಕ್ರಮ ನೇರವೆರಿಸಿದರು
