ಇಳಕಲ್ ತಾಲೂಕಿನಲ್ಲಿ ನಡೆಯುತ್ತಿರುವ 2111ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ ಮಾರ್ಗದರ್ಶನ

Janajagurthi Vedike Uncategorized

ಇಳಕಲ್:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಧರ್ಮಸ್ಥಳ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ಬೆಳ್ತಂಗಡಿ ಸಹಯೋಗದಲ್ಲಿ ಹುನಗುಂದ ತಾಲೂಕಿನ 2111ನೇ ಮದ್ಯ ವರ್ಜನ ಶಿಬಿರ ಇಳಕಲ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.ಶಿಬಿರದ ಐದನೇ ದಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಹಾಗೂ ಜನಜಾಗೃತಿ ವಿಭಾಗದ ನಿರ್ದೇಶಕ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಭೇಟಿ ನೀಡಿ, 66 ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಕುಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ ಅವರು, ಮದ್ಯಮುಕ್ತ ಜೀವನದಿಂದ ಮಾತ್ರ ಸಮಾಜದಲ್ಲಿ ಗೌರವ, ಸ್ಥಾನಮಾನ ಮತ್ತು ಘನತೆಯಿಂದ ಬದುಕಲು ಸಾಧ್ಯ ಎಂದು ಹೇಳಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜದ ಮೇಲೆ ಹೊಂದಿರುವ ಕಾಳಜಿ ಮತ್ತು ಪ್ರೀತಿಯ ಪ್ರತೀಕವೇ ಇಂತಹ ಶಿಬಿರಗಳು ಎಂದು ತಿಳಿಸಿದರು.ವ್ಯವಸ್ಥಾಪನಾ ಸಮಿತಿ ಹಾಗೂ ಊರಿನ ಗಣ್ಯರ ಸಹಕಾರದಿಂದ ಇಂತಹ ಸತ್ಕಾರ್ಯಗಳು ಯಶಸ್ವಿಯಾಗುತ್ತಿವೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ದುಶ್ಚಟಗಳಿಂದ ಮುಕ್ತರಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಮೂಲಕ ಮಾದರಿ ಸಾಧಕರಾಗಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸವಿತಾ ಚಲವಾದಿ, ಪ್ರಮುಖರಾದ ಶ್ರೀ ಹನುಮಂತಪ್ಪ ತುಂಬದ, ಶ್ರೀ ಸಚಿನ್ ಸಾಲಿಮಠ, ಶ್ರೀ ತಿಪ್ಪಣ್ಣ ಬಿಜಕಲ್ಲ ಹಾಗೂ ಶ್ರೀ ಗಿರೀಶ್ ಲದ್ವ ಉಪಸ್ಥಿತರಿದ್ದರು.
ಯೋಜನಾಧಿಕಾರಿಗಳಾದ ಶ್ರೀ ಜೈವಂತ ಪಟಗಾರ, ಶ್ರೀ ನಾಗೇಶ್, ಶ್ರೀ ರಾಜು ನಾಯ್ಕ, ಶಿಬಿರಾಧಿಕಾರಿ ಶ್ರೀ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮಿ, ಜವಾಬ್ದಾರಿ ಮೇಲ್ವಿಚಾರಕರಾದ ಶ್ರೀಮತಿ ಅನ್ನಪೂರ್ಣ ಮತ್ತು ಶ್ರೀಮತಿ ಶ್ರುತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸುಮಂಗಲ, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ ಹಾಗೂ ಸೇವಾಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.