ಪರಮಪೂಜ್ಯ ರಾಜರ್ಷಿ ಡಾII ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ 2112ನೇ ಮದ್ಯವರ್ಜನ ಶಿಬಿರ ವ್ಯವಸ್ಧಾಪನ ಸಮಿತಿ, ಗೌರಿಬಿದನೂರು ಇವರ ಸಂಯುಕ್ತ ಆಶ್ರಯದಲ್ಲಿ*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗೌರಿಬಿದನೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇವರ ಮಾರ್ಗದರ್ಶನದೊಂದಿಗೆ,ಅಧ್ಯಕ್ಷರು, ಕಾರ್ಯದರ್ಶಿ, ಸುಮಂಗಲಿ ಕಲ್ಯಾಣ ಮಂಟಪ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗೌರಿಬಿದನೂರು ಎ&ಬಿ ವಲಯ, ನವಜೀವನ ಸಮಿತಿಗಳು ಗೌರಿಬಿದನೂರು ತಾಲ್ಲೋಕು ಇವರ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲೖಾಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 2112ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವು ಸುಮಂಗಲಿ ಕಲ್ಯಾಣ ಮಂಟಪ ಗೌರಿಬಿದನೂರು ನಗರದಲ್ಲಿ ಜರುಗಿತು.
ಶ್ರೀ ನಾಗರಾಜ್ ಎಂ ನಾಯ್ಕ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗೌರಿಬಿದನೂರು ರವರು ಸರ್ವರಿಗೂ ಸ್ವಾಗತವನ್ನು ಬಯಸಿದರು.
ಶ್ರೀ ತಿಮ್ಮಯ್ಯ ನಾಯ್ಕ್ ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಂಗಳೂರು ಇವರು ಮಾತನಾಡಿ ಇಂದು ಸಮಾಜದಲ್ಲಿ ಸ್ವಾಸ್ತ್ಯವನ್ನು ಕಾಪಾಡುವಂತ ದೃಷ್ಟಿಯಿಂದ ಪೂಜ್ಯ ಖಾವಂದರು ಇಂದು ಪ್ರೌಡ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಇಂದು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ದುಷ್ಚಟಗಳ ಬಗ್ಗೆ ಅನುಭವಿ ತರಬೇತುದಾರರಿಂದ ಮಾಹಿತಿಯನ್ನು ನೀಡಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆಂದು ತಿಳಿಸಿದರು. ಇಂದು ರಾಜ್ಯಾದ್ಯಂತ 2087 ಶಿಬಿರಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡುವ ಮೂಲಕ ಇಂದು ರಾಜ್ಯಾದ್ಯಾಂತ 1ಲಕ್ಷದ 60 ಸಾವಿರಕ್ಕೂ ಮಿಕ್ಕಿದ ಕುಟುಂಬಗಳು ನೆಮ್ಮದಿಯ ಜೀವನವನ್ನು ನಡೆಸಲು ಪೂಜ್ಯ ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿತ್ವದ ಚಿಂತನೆ ಎಂದು ತಿಳಿಸಿದರು. ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಒಬ್ಬ ವ್ಯಕ್ತಿಯ ಅಂತರಂಗವನ್ನು ಭೇದಿಸುವ ಮೂಲಕ ಮನಃ ಪರಿವರ್ತನೆಯನ್ನು ಮಾಡುವಂತಹ ಪ್ರಕ್ರಿಯೆಯೆ ಪೂಜ್ಯರ ಮದ್ಯವರ್ಜನ ಶಿಬಿರ ಎಂದು ತಿಳಿಸುವ ಮೂಲಕ ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯಮಾನ್ಯರು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿದರು.ಉದ್ಗಾಟನಾ ನುಡಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಬಿ. ಮುನೇಗೌಡರು ಮಾತನಾಡಿ ಇಂದು ಸಮಾಜಕ್ಕೆ ಬೇಡವಾದ ವ್ಯಕ್ತಿಗಳನ್ನು ಬಂದೆಡೆಗೆ ಸೇರಿಸಿ ಸಮುದಾಯಗಳನ್ನು ಒಂದುಗೂಡಿಸಿ ಎಂಟು ದಿನಗಳ ಊಟ, ವಸತಿ, ಔಷದಿಯ ಜೊತೆಗೆ ಉತ್ತಮವಾದ ಮಾಹಿತಿಗಳನ್ನು ನೀಡುವ ಮೂಲಕ ನಿಮ್ಮ ಮನಸ್ಸನ್ನು ಪರಿವರ್ತನೆ ಮಾಡಿ ಸಮಾಜವೇ ಗೌರವಿಸುವಂತಹ ವ್ಯಕ್ತಿಗಳನ್ನಾಗಿ ರೂಪಿಸುವಂತಹ ಬಹಳ ಅದ್ಬುತವಾದ ಕಾರ್ಯಕ್ರಮವನ್ನು ಧರ್ಮಸ್ಥಳದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಗೌರಿಬಿದನೂರಿಗೆ ಆಶೀರ್ವದಿಸಿದ್ದು ಈ 2112ನೇ ಮದ್ಯವರ್ಜನ ಶಿಬಿರದ ಉಪಯೋಗವನ್ನು ಪಡೆಯುವಂತೆ ತಿಳಿಸಿ ಶಿಬಿರಾರ್ಥಿಗಳಿಗೆ ಶುಭ ನುಡಿಗಳನ್ನು ನುಡಿದರು.ಮುಖ್ಯ ಅಥಿತಿಗಳ ನುಡಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಚಿದಾನಂದ್ ರವರು ಮಾತನಾಡಿ ಪೂಜ್ಯರು ಸಮಾಜದ ಸ್ವಾಸ್ಥ್ಯವನ್ನು ಉಳಿಸುವ ನಿಟ್ಟಿನಲ್ಲಿ ಸಮುದಾಯ ಮದ್ಯವರ್ಜನ ಶಿಬಿರಗಳನ್ನು ಮತ್ತು ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಯೋಚಿಸಿ ಯೋಜನೆಯನ್ನು ರೂಪಿಸುವ ಮೂಲಕ ಇಂದು ಸಮಾಜಕ್ಕೆ ಮಾದರಿಯ ಕಾರ್ಯಕ್ರಮವನ್ನು ನೀಡಿದ್ದಾರೆಂದು ತಿಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಸಮಗ್ರ ಕಾರ್ಯಕ್ರಮಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ಕೆ.ಜಿ ಪೌರಾಯುಕ್ತರು ನಗರಸಭೆ ಗೌರಿಬಿದನೂರು, ಡಾ.ಹೇಮಾ ಬಿ.ವಿ ತಾಲ್ಲೋಕು ವೈದ್ಯಾಧಿಕಾರಿಗಳು ಗೌರಿಬಿದನೂರು, ಡಾ.ಪ್ರಭಾನಾರಾಯಣಗೌಡ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ, ಶ್ರೀ ವಿಜಯ ರಾಘವ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಗೌರಿಬಿದನೂರು, ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸದಸ್ಯರುಗಳಾದ ಶ್ರೀ ಮೋಹನ್, ಶ್ರೀ ಚಂದ್ರಶೇಖರ್, ಶ್ರೀ ಜಗನ್ನಾಥ್, ಶ್ರೀ ಲಕ್ಷ್ಮಿಪತಿ, ಶ್ರೀ ಗಂಗಾಧರಆಚಾರಿ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಶ್ರೀ ಪ್ರಭಾಕರ್ ಅಧ್ಯಕ್ಷರು 2112ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರಿಬಿದನೂರು ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಶ್ರೀ ನಾಗೇಂದ್ರ. ಹೆಚ್.ಎಸ್ ಶಿಭಿರಾಧಿಕಾರಿ, ಶ್ರೀಮತಿ ನೇತ್ರಾವತಿ, ಆರೋಗ್ಯ ಸಹಾಯಕರು, ಶ್ರೀ ದರ್ಶನ್ ಎಂ. ಎಸ್ ಮೇಲ್ವಿಚಾರಕರು ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಂಗಳೂರು.ಇವರು ಉಪಸ್ಥಿತರಿದ್ದರು.ಗೌರಿಬಿದನೂರು ತಾಲ್ಲೋಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು / ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಗೌರಿಬಿದನೂರು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಅಶ್ವಿನಿ ಸರ್ವರಿಗೂ ವಂದಿಸಿದರು.ಗೌರಿಬಿದನೂರು-ಎ ವಲಯದ ಮೇಲ್ವಿಚಾರಕರಾದ ಶ್ರೀ ಅಜಿತ್ ಕುಮಾರ್ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.
