ಬೆಂಗಳೂರು ನಗರ ಮತ್ತು ಗ್ರಾಮಾಂತರದ ಯೋಜನಾ ವ್ಯಾಪ್ತಿಗಳ ಸ್ವಾಸ್ಥ್ಯಸಂಕಲ್ಪತರಬೇತುಧಾರರ ತರಬೇತಿ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬೆಂಗಳೂರು ಗ್ರಾಮಾಂತರ/ ಪೂರ್ವ ಜಿಲ್ಲೆ.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಬೆಂಗಳೂರು ಗ್ರಾಮಾಂತರ / ಪೂರ್ವ ಜಿಲ್ಲೆ. ಇವರ ಸಂಯುಕ್ತ ಆಶ್ರಯದಲ್ಲಿ ಪರಮ ಪೂಜ್ಯ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ*
ದೊಡ್ಡಬಳ್ಳಾಪುರ ಯೋಜನಾಕಛೇರಿ ಸಭಾಂಗಣದಲ್ಲಿ “ಬೆಂಗಳೂರು ಗ್ರಾಮಾಂತರ /ಪೂರ್ವ ಜಿಲ್ಲೆಗಳ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ” ವನ್ನು ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಉಮರಬ್ಬರವರು ತರಬೇತಿ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳು ಮತ್ತು ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿ. ಪೖೆಸ್ ಸರ್ ರವರ ವೖೆಯಕ್ತಿಕ ಪರಿಚಯವನ್ನು ಸಭೆಗೆ ತಿಳಿಸುವ ಮೂಲಕ ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯಮಾನ್ಯರನ್ನು ಮತ್ತು ಸ್ವಾಸ್ಥ್ಯ ಸಂಕಲ್ಪ ತರಬೇತುದಾರರನ್ನು ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರುವ ಮೂಲಕ ಸ್ವಾಗತ ಕಾರ್ಯಕ್ರಮವನ್ನು ನೆರವೇರಿಸಿದರು.ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯಮಾನ್ಯರು ದೀಪವನ್ನು ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿದರು.ಕಾರ್ಯಕ್ರಮದ ಪ್ರಮುಖ ಅಂಗವಾಗಿ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೇಂದ್ರ ಕಛೇರಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ರಾಜ್ಯ ಕಾರ್ಯದರ್ಶಿಗಳು ಮತ್ತು ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿ. ಪೖೆಸ್ ಸರ್ ರವರು ಭಾಗವಹಿಸಿ ಮಾತನಾಡುತ್ತಾ ಇಂದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಹ ನಿಟ್ಟಿನಲ್ಲಿ ಯೋಚನೆಯನ್ನು ಮಾಡಿ ಯೋಜನೆಯನ್ನು ರೂಪಿಸುವಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಂದು ಯುವಜನತೆಯನ್ನು ಎಚ್ಚರಿಸುವಂತಹ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ ಕೀರ್ತಿ ಪೂಜ್ಯ ಖಾವಂದರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಪೂಜ್ಯರು ಮತ್ತು ವಾತ್ಸಲ್ಯಮಯಿ ಮಾತೃಶ್ರೀ ಅಮ್ಮನವರ ದೂರ ದೃಷ್ಠಿತ್ವದ ಪರಿಕಲ್ಪನೆ ಮತ್ತು ಚಿಂತನೆಗಳಿಂದ ಇಂದು ನಾವು ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ತಂಬಾಕು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಗೊಳಿಸುವಂತಹ ಪ್ರಮುಖ ಕಾರ್ಯಕ್ರಮದ ತರಬೇತುದಾರರಾಗಿದ್ದೇವೆ ಎಂದು ತಿಳಿಸಿದರು.ನಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟಿರುವುದು ನಾವು ಮುಂದಿನ ಪೀಳಿಗೆಗೆ ನೀಡುತ್ತಿರುವ ಕೊಡುಗೆ ಎಂದು ತಿಳಿದು ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮನಃ ಮುಟ್ಟುವಂತೆ ಸರಿಯಾದ ರೀತಿಯಲ್ಲಿ 45 ನಿಮಿಷಗಳು ಮೀರದಂತೆ ಕಾಲೇಜು ವಿದ್ಯಾರ್ಧಿಗಳ ಮನಸ್ಥಿತಿಯನ್ನು ಅರಿತು ಮಾಹಿತಿಯನ್ನು ನೀಡಬೇಕೇ ಹೊರತು ನೀವು ನೀಡುವ ಮಾಹಿತಿಯಿಂದ ವಿದ್ಯಾರ್ಥಿಗಳು ಕೂತೂಹಲಕಾರಿಯಾಗಿ ಮಾದಕವಸ್ತುಗಳ ಬಳಕೆಗೆ ನಮ್ಮ ಮಾಹಿತಿ ಪ್ರಚೋದನೆ ನೀಡುವಂತಿರಬಾರದೆಂದು ತಿಳಿಸಿದರು. ಇಂದು ಕರ್ನಾಟಕ ರಾಜ್ಯದಲ್ಲಿ 11790 ಮದ್ಯದಂಗಡಿಗಳಿದ್ದು ಇಂದಿನ ಯುವಜನತೆಯ ಗಮನವನ್ನು ಸೆಳೆಯುವ ದೃಷ್ಠಿಯಿಂದ ಇಂದು ಸಾಮಾಜಿಕ ಮತ್ತು ಟೀವಿ ಮಾದ್ಯಮಗಳಲ್ಲಿ ಇಂದು ಆಕರ್ಷಣೀಯವಾದ ಜಾಹೀರಾತುಗಳ ಮೂಲಕ ಯುವಜನತೆಯನ್ನು ತನ್ನತ್ತ ಸೆಳೆಯುತ್ತಿದ್ದು ಇದರಬಗ್ಗೆ ನಾವು ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡುವುದು ಅಗತ್ಯವಾಗಿ ಆಗಬೇಕಿದೆ ಎಂದು ತಿಳಿಸಿದರು. ಇಂದು ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಗೆ ಪ್ರಮುಖ ಕಾರಣವೇ ಆ ವ್ಯಕ್ತಿಯ / ವಿದ್ಯಾರ್ಥಿಯ ದುರ್ಬಲ ಮನಸ್ಸು ಮತ್ತು ದುರ್ಬಲ ವ್ಯಕ್ತಿತ್ವವೇ ಆಗಿದ್ದು ಅದನ್ನು ಅರಿತು ತರಬೇತಿ ನೀಡುವ ತರಬೇತುದಾರರಾಗಬೇಕೆಂದು ತಿಳಿಸಿದರು.
1.*ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಕಲ್ಪನೆ, ಉದ್ದೇಶ*
2.*ಹಾನಿಕಾರಕ ದುಶ್ಚಟಗಳು*
3.*ದುಶ್ಚಟಗಳು ಹೇಗೆ ಆರಂಭವಾಗುತ್ತದೆ*
4.*ಮಾದಕ ವಸ್ತುಗಳು ಯಾವುವು*
5.*ಮಾದಕ ವಸ್ತುಗಳ ದುಷ್ಪರಿಣಾಮಗಳು*
6.*ದುಶ್ಚಟಗಳನ್ನು ತಡೆಗಟ್ಟುವುದು ಹೇಗೆ ಎಂಬ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಸಮಗ್ರವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
ತರಬೇತಿಯಲ್ಲಿ ಪಾಲ್ಗೊಂಡ ತರಬೇತುದಾರರು ತರಬೇತಿಯ ಬಗ್ಗೆ ತಮ್ಮ ವೈಯಕ್ತಿಕ ಅನಿಸಿಕೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಬೆಂಗಳೂರು ಗ್ರಾಮಾಂತರ/ ಪೂರ್ವ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ವೆಂಕಟೇಶ್.ಟಿ ತರಬೇತಿಯ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ಜಿಲ್ಲಾಕಛೇರಿಯ ಜಿಲ್ಲಾ ನಿರ್ದೇಶಕರಾದ ಶ್ರೀ ಪದ್ಮಯ್ಯ, ಬೆಂಗಳೂರು ಗ್ರಾಮಾಂತರ/ಪೂರ್ವ ಜಿಲ್ಲಾಕಛೇರಿ ವ್ಯಾಪ್ತಿಯ ಎಂ.ಐ.ಎಸ್ ಯೋಜನಾಧಿಕಾರಿಗಳಾದ ಶ್ರೀ ರಿತೇಶ್ ಮತ್ತು ಶ್ರೀ ಮಾದವ್, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ಶ್ರೀ ತಿಮ್ಮಯ್ಯನಾಯ್ಕ, ನೆಲಮಂಗಲ ಯೋಜನಾಕಛೇರಿ ಯೋಜನಾಧಿಕಾರಿ ಶ್ರೀಮತಿ ಸುಜಾತ ಶೆಟ್ಟಿ,ಯಲಹಂಕ ಯೋಜನಾಕಛೇರಿ ಯೋಜನಾಧಿಕಾರಿ ಶ್ರೀಮತಿ ಸವಿತಾ ಶೆಟ್ಟಿ , ಮಾಲೂರು ಯೋಜನಾಕಛೇರಿ ಯೋಜನಾಧಿಕಾರಿ ಶ್ರೀ ಸತೀಶ್, ಹೊಸಕೋಟೆ ಯೋಜನಾಕಛೇರಿ ಯೋಜನಾಧಿಕಾರಿ ಶ್ರೀ ಹರೀಶ್, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರೀ ದರ್ಶನ್ ಎಂಎಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾಕಛೇರಿಯ ಆಡಿಟ್ ಪ್ರಬಂಧಕರಾದ ಶ್ರೀ ಆದರ್ಶ್, ಐಟಿ ಪ್ರಬಂಧಕರಾದ ಶ್ರೀಮತಿ ಅಕ್ಷತಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮತ್ತು ಸ್ವಾಸ್ಥ್ಯ ಸಂಕಲ್ಪ ತರಬೇತುದಾರರು ತರಬೇತಿಯಲ್ಲಿ ಭಾಗವಹಿಸಿದ್ದರು.
ಕೆ.ಆರ್ ಪುರಂ ಯೋಜನಾಕಛೇರಿಯ ಯೋಜನಾಧಿಕಾರಿ ಶ್ರೀ ಪುರುಷೋತ್ತಮ್ ತರಬೇತಿಯಲ್ಲಿ ಭಾಗವಹಿಸಿದ ಸರ್ವರಿಗೂ ವಂದನೆಗಳನ್ನು ತಿಳಿಸಿ ವಂದನಾರ್ಪಣಾ ಕಾರ್ಯಕ್ರಮವನ್ನು ನೆರವೇರಿಸಿದರು.*