ಜಾಗೃತಿ ಸೌಧದಲ್ಲಿ 277ನೇ ಮಧ್ಯವರ್ಜನ ಶಿಬಿರದ 4ನೇ ದಿನ ಧರ್ಮಾಧಿಕಾರಿಗಳ ದಿವ್ಯ ಉಪಸ್ಥಿತಿ

Janajagurthi Vedike Uncategorized

ನವಜೀವನದ ಕಡೆಗೆ ಮತ್ತೊಂದು ಹೆಜ್ಜೆ: ಜಾಗೃತಿ ಸೌಧದಲ್ಲಿ 277ನೇ ಮಧ್ಯವರ್ಜನ ಶಿಬಿರದ 4ನೇ ದಿನ ಧರ್ಮಾಧಿಕಾರಿಗಳ ದಿವ್ಯ ಉಪಸ್ಥಿತಿ
ಧರ್ಮಸ್ಥಳ: ವ್ಯಸನಗಳ ಸುಳಿಯಿಂದ ಹೊರಬಂದು ಪರಿಪೂರ್ಣ ಬದುಕನ್ನು ರೂಢಿಸಿಕೊಳ್ಳಲು ಹಂಬಲಿಸುತ್ತಿರುವ ಮನಸ್ಸುಗಳಿಗೆ ಧರ್ಮಸ್ಥಳವು ಸದಾ ಆಸರೆಯಾಗಿದೆ. ಇಲ್ಲಿನ ‘ಜಾಗೃತಿ ಸೌಧ’ದಲ್ಲಿ ಆಯೋಜಿಸಲಾಗಿರುವ 277ನೇ ವಿಶೇಷ ಮಧ್ಯವರ್ಜನ ಶಿಬಿರದ ನಾಲ್ಕನೇ ದಿನದಂದು ನಡೆದ ವಿಶೇಷ ಕಾರ್ಯಕ್ರಮವು ಎಲ್ಲರಲ್ಲೂ ಹೊಸ ಚೈತನ್ಯವನ್ನು ಮೂಡಿಸಿತು.
ಕಾರ್ಯಕ್ರಮದ ವಿಶೇಷ ವರದಿ:ಪೂಜ್ಯರ ಸಾನಿಧ್ಯ ಹಾಗೂ ದಿವರ್ಶನ: ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಪರಮಪೂಜ್ಯರು ದಿವ್ಯ ಸಾನಿಧ್ಯ ವಹಿಸಿ, ಶಿಬಿರದಲ್ಲಿ ಪಾಲ್ಗೊಂಡಿರುವ 58 ಜನ ಶಿಬಿರಾರ್ಥಿಗಳಿಗೆ ಪ್ರೀತಿಯ ಆಶೀರ್ವಾದ ಹಾಗೂ ಬದುಕಿನ ದಿಕ್ಕನ್ನು ಬದಲಿಸುವ ಮಾರ್ಗದರ್ಶನದ ನುಡಿಗಳನ್ನು ಅನುಗ್ರಹಿಸಿದರು.