ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 272ನೇ ವಿಶೇಷ ಮದ್ಯವರ್ಜನ ಶಿಬಿರದ 78 ಮಂದಿ ಶಿಬಿರಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾರ್ಗದರ್ಶನ ನೀಡುತ್ತಾ ಮದ್ಯಪಾನ ಒಳ್ಳೆಯದಲ್ಲ ಇದು ಮನುಷ್ಯನ ಪಂಚೇಂದ್ರಿಯಗಳಿಗೆ ತೊಡಕನ್ನು ಉಂಟುಮಾಡುತ್ತದೆ.ಮನುಷ್ಯನಿಗೆ ಕೆಟ್ಟ ವಸ್ತುಗಳ ಮೇಲೆ ಆಕರ್ಷಣೆ ಜಾಸ್ತಿ ಕೆಟ್ಟ ಅಭ್ಯಾಸಗಳು ಸುಲಭವಾಗಿ ಅಂಟಿಕೊಳ್ಳುತ್ತದೆ ಆದರೆ ಅದನ್ನು ಬಿಡ ಬೇಕಾದರೆ ಕಷ್ಟ ಪಡಬೇಕಾಗುತ್ತದೆ ಕುಡಿತದಿಂದ ಆರೋಗ್ಯ ಹಾಳಾಗುವುದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ . ದುಶ್ಚಟದಿಂದ ದೂರವಿದ್ದಾಗ ಸಂಸಾರದಲ್ಲಿ ಹಾಗೂ ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಸಾಧ್ಯ ಎಂದು ಪೂಜ್ಯರು ಮಾರ್ಗದರ್ಶನ ನೀಡಿದರು.ಶ್ರೀಮತಿ ಹೇಮಾವತಿ ವಿ ಹೆಗ್ಗಡವರು* ಶಿಬಿರಾರ್ಥಿಯವರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪೂಜ್ಯರ ಆಪ್ತ ಕಾರ್ಯದರ್ಶಿಯವರದ ವೀರು ಶೆಟ್ಟಿ ,ಜನ ಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ .ವಿ .ಪಾಯಸ್, ಆಡಳಿತ ಯೋಜನಾಧಿಕಾರಿಗಳಾದ ಮಾಧವ ಗೌಡ , ಶಿಬಿರಾಧಿಕಾರಿ ನಾಗೇಂದ್ರ, ಜಯಾನಂದ ಆರೋಗ್ಯ ಸಹಾಯಕರ ಶ್ರೀಮತಿ ಫಿಲೋಮಿನಾ, ಕುಮಾರಿ ತುಷಾರ ಆಪ್ತ ಸಮಾಲೋಚಕರಾದ ಮಧುರವರು ಉಪಸ್ಥಿತರಿದ್ದರು.ವಿಶೇಷ ಮದ್ಯವರ್ಜನಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನ ರಾಜ್ಯ ಕಾರ್ಯದರ್ಶಿಗಳು ಹಾಗೂ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯಸ್ ರವರು ನಡೆಸಿಕೊಟ್ಟರು
